ಮಾಜಿ ಸಚಿವರಿಂದ ಐತಿಹಾಸಿಕ ಸಾಧನೆ..!

ಬೆಂಗಳೂರು:

      ಕ್ರಾಂತಿಕಾರಿ ಬಸವಣ್ಣನವರ ವಚನಗಳು ಬಸವ ಸಾಹಿತ್ಯದ ಮಹತ್ವ ಹಾಗೂ ಬಸವೇಶ್ವರರ ವಿಚಾರಧಾರೆಗಳು ದೇಶದ ಗಡಿಯಾಚೆಯೂ ಪಸರಿಸುತ್ತಿವೆ. ಲಂಡನ್ ನ ಥೇಮ್ಸ್ ನದಿ ದಂಡೆ ಮೇಲೆ ವಿಶ್ವ ಗುರು ಬಸವಣ್ಣ ಪ್ರತಿಮೆ ಪ್ರತಿಷ್ಠಾಪಿಸಿದ್ದು ಇತಿಹಾಸವಾದರೂ ಇದೀಗ ಲಿಂಗಾಯತ ಸಮುದಾಯದ ಮುಖಂಡ ಮಾಜಿ ಸಚಿವ ಎಂ.ಬಿ.ಪಾಟೀಲ್ ಇದೀಗ ಮತ್ತೊಂದು ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ.

      ಇದೀಗ ಎಂ.ಬಿ.ಪಾಟೀಲ್ ಸಹಾಯ ಮತ್ತು ಸಹಕಾರದಿಂದ ಅರಬ್ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಬಸವಣ್ಣನರ ಪ್ರತಿಮೆ ಸ್ಥಾಪನೆಯಾಗಿದೆ. ಆ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಬಸವಣ್ಣನವರ ಚಿಂತನೆಗಳು ಹರಡುವಂತಾಗಿದೆ.ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ದುಬೈ ಬಸವ ಸಮಿತಿ ವತಿಯಿಂದ ಬಸವಣ್ಣನವರ ಪಂಚಲೋಹದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link