ಕುಣಿಗಲ್
ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆ ಪೇದೆಯೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಹಾಗೂ ಪೊಲೀಸ್ ಕ್ವಾರ್ಟರ್ಸ್, ಕೋಟೆ ಸೇರಿದಂತೆ ನಾಲ್ಕು ಕಡೆ ತಾಲ್ಲೂಕು ಆಡಳಿತ ಸೀಲ್‍ಡೌನ್ ಮಾಡಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಪೊಲೀಸ್ ಇಲಾಖಾ ಸಿಬ್ಬಂದಿ ಆಂತಕಕ್ಕೆ ಒಳಗಾಗಿದ್ದಾರೆ. ರಾತ್ರೊ ರಾತ್ರಿ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ವಾಸವಾಗಿದ್ದ ಪೊಲೀಸರ ಕೆಲವು ಕುಟುಂಬದವರು ತಮ್ಮ ಊರುಗಳಿಗೆ ತೆರಳಿದ್ದಾರೆ. ಹಲವರು ಬಹಳ ಎಚ್ಚರಿಕೆ ವಹಿಸಿದ್ದಾರೆ. ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಿರುವ ಕಾರಣ, ತಾಲ್ಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನಕ್ಕೆ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡಲಾಗಿದೆ. ಪಟ್ಟಣದ ಕೋಟೆ ಪ್ರದೇಶದ ಮಹಿಳೆ ಹಾಗೂ ಸಿದ್ದಾರ್ಥ ಕಾಲನಿಯ ಮಹಿಳೆಗೆ, ಅಗ್ರಹಾರದಲ್ಲಿ ಪುರುಷನೊಬ್ಬನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮೂರು ಬಡಾವಣೆಯನ್ನು ತಾಲ್ಲೂಕು ಆಡಳಿತ ಸೀಲ್‍ಡೌನ್ ಮಾಡಿದ್ದು, ನಾಗರಿಕರಿಗೆ ನಿತ್ಯ ಧ್ವನಿ ವರ್ಧಕದಲ್ಲಿ ಎಚ್ಚರಿಕೆ ನೀಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ