ಬ್ಯಾಡ್ಮಿಂಟನ್ ಗೆ ವಿದಾಯ ಹೇಳಿದ ಲಿನ್ ಡಾನ್..!

ಬೀಜಿಂಗ್:

     ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ  ಸೂಪರ್ ಸ್ಟಾರ್ ಎಂದೇ ಖ್ಯಾತರಾದ 36 ವರ್ಷದ ಲಿನ್ ಡಾನ್ ಅವರು ತಮ್ಮ ಕ್ರೀಡಾ ಬದುಕಿನಿಂದ ನಿವೃತ್ತಿಯಾಗುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ.ಸತತ ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಲಿನ್ ಇತಿಹಾಸ ನಿರ್ಮಿಸಿದ್ದರು. 2008 ಬೀಜಿಂಗ್, 2012 ಲಂಡನ್ ಒಲಿಂಪಿಕ್ಸ್ ನಲ್ಲಿ ಈ ಹೆಗ್ಗಳಿಕೆ ಸಾಧಿಸಿದ್ದರು

     ವೃತ್ತಿಜೀವನದ ಅತ್ಯಂತ ಕಷ್ಟದ ಸಮಯದಲ್ಲಿ ನನ್ನ ಕುಟುಂಬ, ತರಬೇತುದಾರರು, ತಂಡದ ಸದಸ್ಯರು ಹಾಗೂ ಅಭಿಮಾನಿಗಳು ನನಗೆ ಬೆಂಬಲ ನೀಡಿದ್ದಾರೆ. ಈಗ ನನಗೆ 37 ವರ್ಷ ವಯಸ್ಸಾಗಿರುವ ಕಾರಣ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಇತರ ಕ್ರೀಡಾ ಪಟುಗಳೊಂದಿಗೆ ಆಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

    ಟೋಕಿಯೋ ಒಲಿಂಪಿಕ್ಸ್ ನಲ್ಲಿ ದೇಶದ ಪರವಾಗಿ ಆಡಬೇಕೆಂದು ಭಾವಿಸಿದ್ದೆ. ಆದರೆ ಪ್ರಪಂಚದಾದ್ಯಂತ ಕೊರೋನಾ ಕಾರಣದಿಂದ ಎಲ್ಲ ಕ್ರೀಡಾ ಕೂಟಗಳು ಮುಂದೂಡಿರುವ ಕಾರಣ ಟೋಕಿಯೋ ಒಲಿಂಪಿಕ್ಸ್ ಕನಸು ಕರಗಿ ಹೋಗಿದೆ. ಇಷ್ಟು ದಿನ ನನ್ನನ್ನು ಪ್ರೀತಿಸಿದವರಿಗೆ ಧನ್ಯವಾದಗಳು ಎಂದು ಲಿನ್ ಡಾನ್ ಟ್ವಿಟ್ ನಲ್ಲಿ ಬರೆದುಕೊಂಡಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link