ಶಿರಾ
ಯಾವ ರೈತರೆ ಆಗಲಿ ಹೈನುಗಾರಿಕೆಯನ್ನು ಕೈ ಬಿಡದೆ, ಹೈನುಗಾರಿಕೆಗೆ ಒತ್ತು ನೀಡುವ ಮೂಲಕ ತಮ್ಮ ಆರ್ಥಿಕ ಸಂಕಷ್ಟವನ್ನು ಪರಿಹರಿಸಿಕೊಳ್ಳಬಹುದಾಗಿದೆ. ಈ ಹೈನುಗಾರಿಕೆ ರೈತರಿಗೆ ವರದಾನವೂ ಹೌದು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ತಿಳಿಸಿದರು.
ನಗರದ ಹಾಲು ಸಂಸ್ಕರಣಾ ಘಟಕದ ಆವರಣದಲ್ಲಿ ಮಂಗಳವಾರ ಮರಣ ಹೊಂದಿದ ರಾಸುಗಳ ರೈತ ಕುಟುಂಬಗಳಿಗೆ ಸಹಾಯ ಧನದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.ಶಿರಾ ಭಾಗದಲ್ಲಿ ಮಳೆ-ಬೆಳೆ ಕಡಿಮೆಯಾದರೂ, ಇಲ್ಲಿನ ರೈತರಿಗೆ ಹೈನುಗಾರಿಕೆಯಲ್ಲಿ ತೊಡಗುವ ಹಂಬಲವಿದೆ. ನಿರುದ್ಯೋಗಿಗಳನ್ನು ಉದ್ಯೋಗವಂತರನ್ನಾಗಿ ಮಾಡುವ ಶಕ್ತಿ ಹೈನುಗಾರಿಕೆಯಲ್ಲಿದೆ ಎಂದರು.
ಜಿಲ್ಲೆಯಲ್ಲಿ ಮಡಿದ ರಾಸುಗಳ ಮಾಲಿಕತ್ವ ಹೊಂದಿದ ರೈತರಿಗೆ ವಿಮೆಯ ಹಣವನ್ನು ಚೆಕ್ ಮೂಲಕ ಜಿಲ್ಲಾ ಹಾಲು ಒಕ್ಕೂಟವು ನೀಡುತ್ತಿದೆ. ಕೆಲ ರೈತರು 50,000 ದಿಂದ 60,000 ರೂ.ಗಳವರೆಗೂ ವಿಮಾ ಹಣವನ್ನು ಪಡೆದಿದ್ದಾರೆ. ಒಕ್ಕೂಟದಿಂದ ಲಭ್ಯವಾಗುವ ಸೌಲಭ್ಯಗಳನ್ನು ರೈತರು ಬಳಸಿಕೊಳ್ಳಬೇಕು ಎಂದರು.ಹಾಲು ಉಪ ಕೇಂದ್ರದ ಉಪ ವ್ಯವಸ್ಥಾಪಕ ಡಿ.ವೀರಣ್ಣ, ಸಹಾಯಕ ವ್ಯವಸ್ಥಾಪಕ ಮಧುಸೂದನ್, ವಿಸ್ತರಣಾಧಿಕಾರಿ ದಿವಾಕರ್ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ