ಬೆಂಗಳೂರು:
ನಗರದಲ್ಲಿ ಮತ್ತೆ ಪುಡಾರಿಗಳ ಪುಂಡಾಟ ಮಿತಿಮೀರಿದ್ದು, ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಮನೆ ಹತ್ತಿರವೇ ಪುಡಿರೌಡಿಗಳು ಬಡಿದಾಡಿಕೊಂಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಹೌದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ಗಲಾಟೆ ನಡೆದಿದೆ.
ಹಾಡಹಗಲೇ ಸಿಎಂ ಮನೆ ಬಳಿ ನಡುರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.ಹಾಡಹಗಲೇ ನಡುರಸ್ತೆಯಲ್ಲಿ ಎರಡು ಗುಂಪುಗಳು ದೊಣ್ಣೆ, ಬೆಲ್ಟ್ ಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಘಟನೆ ನಡೆದ ಕೇವಲ 500 ಮೀಟರ್ ದೂರದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರ ಮನೆ ಇದೆ. ಈ ಏರಿಯಾದಲ್ಲೇ ಪುಂಡಾಟ ಮಾಡ್ತಾರೆ ಅಂದ್ರೆ ಬೇರೆ ಕಡೆ ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಸದ್ಯ ಈ ಘಟನೆಯ ವಿಡಿಯೋ ಪರಿಶೀಲನೆ ಮಾಡ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ