ಕೊರಟಗೆರೆ
ಕೊರಟಗೆರೆ ತಾಲ್ಲೂಕಿನಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವರ್ತಕ ರೊಬ್ಬರು ಕೊರೋನಾ ಸೋಂಕಿನಿಂದ ಹತರಾಗಿರುವುದು, ತಾಲ್ಲೂಕಿನ ಪ್ರಥಮ ಕೊರೋನಾ ಸೋಂಕಿತ ಸಾವಾಗಿ ಅಂತ್ಯಕ್ರಿಯೆ ನಂತರ ಫಲಿತಾಂಶ ಹೊರ ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿದಂತಾಗಿದೆ
ಕೊರಟಗೆರೆ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 31 ಕ್ಕೆ ಏರಿದ್ದು, ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿದಿನ 4-5, ಒಂದೇ ದಿನ 17 ಸೋಂಕಿತರು ದೃಢಪಟ್ಟಿದ್ದು, ಸಾವಿಗೀಡಾದ ಸೋಂಕಿನ ಫÀಲಿತಾಂಶ ಹೊರಬಿದ್ದಿರುವುದು ನಾಗರಿಕರಲ್ಲಿ ನಿದ್ದೆಗೆಡಿಸಿದೆ.
ಕೊರಟಗೆರೆ ಪಟ್ಟಣದ ಸುಂಕಲ್ ಬೀದಿಯ ವರ್ತಕ ಲಕ್ಷ್ಮೀವೆಂಕಟೇಶ್ ಎಂಬ ವ್ಯಕ್ತಿಯ ಅಂತ್ಯಕ್ರಿಯೆ ನಂತರ ಕೊರೋನಾ ಸೋಂಕು ದೃಡಪಟ್ಟಿದ್ದು, ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ನಂಬಿ, ಅಚಾತುರ್ಯದಿಂದ ಕೊವಿಡ್-19 ಟೆಸ್ಟ್ ಬರುವ ಮುನ್ನವೆ ಅಂತ್ಯಕ್ರಿಯೆ ನಡೆದಿದೆ. ನಂತರ ಮಾರನೆ ದಿನ ಫಲಿತಾಂಶ ಪಾಸಿಟಿವ್ ಬಂದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸೋಂಕಿತ ವ್ಯಕ್ತಿಯ ಪೋಷಕರನ್ನು ಕ್ವಾರೈಂಟೈನ್ ಮಾಡಿರುವುದಲ್ಲದೆ, ಇಡೀ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ.
ತಾಲ್ಲೂಕಿನ 31 ಸೋಂಕಿತರ ಪೈಕಿ ಒಬ್ಬರು ಮಾತ್ರ ಗುಣಮುಖರಾಗಿ ಬಿಡುಗಡೆಯೊಂದಿದ್ದು, ಕೊರೋನಾ ಸೋಂಕಿತ ಮರಣ ಹೊಂದಿದ ವ್ಯಕ್ತಿಯ ಸೋಂಕಿತರ ಪ್ರಯಾಣದ ಮಾಹಿತಿ ಇನ್ನೂ ಪತ್ತೆಯಾಗಿಲ್ಲ. ಐದು ಮಂದಿ ಪ್ರಾಥಮಿಕ ಸಂಪರ್ಕ ಹೊಂದಿರುತ್ತಾರೆ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ದ್ವಿತೀಯ ಸಂಪರ್ಕ ಮಾಹಿತಿಯನ್ನು ಸೋಂಕಿತ ವ್ಯಕ್ತಿಯ ಮರಣದ ನಂತರ ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ದೊರಕಿದ್ದು, ಸೋಂಕಿತ ವ್ಯಕ್ತಿಯು ಕೊರೋನಾ ವೈರಸ್ನಿಂದಲೆ ಮೃತರಾಗಿದ್ದಾರೆ ಎಂದು ದೃಢಪಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ