ಕೋವಿಡ್ ಹಗರಣ : ಹಿರಿಯ ನಾಯಕರ ಸಭೆ ಕರೆದ ಡಿಕೆಶಿ

ಬೆಂಗಳೂರು

     ಕೋವಿಡ್-19 ವೈದ್ಯಕೀಯ ಉಪಕರಣ ಖರೀದಿ ಹಗರಣದ ವಿರುದ್ಧ ಪ್ರತಿಭಟನೆಗೆ ನಿರ್ಣಯ ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋಮವಾರ ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದಾರೆ.ಕಳೆದ ಗುರುವಾರ ಸಭೆ ನಡೆಸಿದ್ದ ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ದಾಖಲೆ ಸಂಗ್ರಹಿಸಲು ಹಾಗೂ ಭ್ರಷ್ಟಾಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದು, ಸೋಮವಾರ ಹಿರಿಯ ನಾಯಕರ ಸಭೆ ನಡೆಸಿ ಪ್ರತಿಭಟನೆಗೆ ಸ್ವರೂಪ ಸಿದ್ಧಪಡಿಸಲಾಗುತ್ತಿದೆ.

     ಸಭೆಯಲ್ಲಿ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸಹ ಪಾಲ್ಗೊಳ್ಳುತ್ತಿದ್ದು, ಹೋರಾಟವನ್ನು ಹೇಗೆ ನಡೆಸಬಹುದು?. ಏನು ಮಾಡಬಹುದೆಂಬ ಬಗ್ಗೆ ಸಲಹೆ ನೀಡಲಿದ್ದಾರೆ. ಹಾಗೂ ಹಿರಿಯ ನಾಯಕರ ಪಾತ್ರವೇನು?ಎಂಬುದು ಸಹ ಸಭೆಯಲ್ಲಿ ಚರ್ಚೆಯಾಗಲಿದ್ದು, ಪ್ರತಿಭಟನೆಗೆ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗುವುದು.

    ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲು ನಿರ್ಣಯಕೈಗೊಳ್ಳಲಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿರುವುದರಿಂದ ಪ್ರತಿಭಟನೆಯ ಮುನ್ನ ಜಿಲ್ಲಾ ಮುಖಂಡರು ಜಿಲ್ಲಾ ವ್ಯಾಪ್ತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಿಭಟನೆಗೆ ಕರೆ ನೀಡುವಂತೆ ಸೂಚಿಸಲಾಗಿದೆ. ಪ್ರತಿಭಟನೆಯ ಸ್ವರೂಪ ರೂಪುರೇಷೆ, ದಿನಾಂಕ ಇತ್ಯಾದಿಗಳ ಬಗ್ಗೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ