ಹೊನ್ನವಳ್ಳಿ
ಗ್ರಾಮಸ್ಥರಿಗೆ 10-12 ದಿನಕ್ಕೆ ನೀರನ್ನುಕೊಡುತ್ತಿದ್ದಾರೆಆದರೆರಸ್ತೆ ನಿರ್ಮಾಣ ಮಾಡುತ್ತಿರುವಗುತ್ತಿಗೆದಾರರಿಗೆ ಮಾತ್ರ ಸರ್ಕಾರದಟ್ಯಾಂಕ್‍ನಿಂದಲೇ ಸರ್ಕಾರಿ ಹಣದಿಂದ 5-6 ಟ್ಯಾಂಕರ್ ನೀರುಕೊಡುತ್ತಿರುವುದುಚರ್ಚೆಗೆಗ್ರಾಸವಾಗಿದೆ.
ಹೊನ್ನವಳ್ಳಿ ಗ್ರಾಮ ಪಂಚಾಯ್ತಿಯ 2500ಕ್ಕೂ ಹೆಚ್ಚು ಮನೆಗಳಿದ್ದು ವಾರಕ್ಕೆಅಥವಾ ಹತ್ತು ದಿನಕ್ಕೊಮ್ಮೆ ನೀರು ಬಿಡುತ್ತಾರೆ ಕೇಳಿದರೆ ಬೋರುಗಳಲ್ಲಿ ನೀರು ನಿಂತು ಹೋಗಿದೆ.ಒಂದೇ ಬೋರ್‍ವೆಲ್‍ಓಡುತ್ತಿದ್ದಇದರಲ್ಲೇಊರಿಗೆಲ್ಲಾ ನೀರನ್ನುಅನುಸರಿಸಬೇಕೆ.ಏನು ಮಾಡಲು ಸಾಧ್ಯವಿಲ್ಲ ಎಂದು ಸಾರ್ವಜನಿಕರಿಗೆಗ್ರಾಮ ಪಂಚಾಯಿತಿ ಅಧಿಕಾರಿಗಳು ತಿಳಿಸುತ್ತಾರೆ.
ಹೊನ್ನವಳ್ಳಿ-ಗ್ಯಾರಘಟ್ಟದ ರಸ್ತೆಕಾಮಗಾರಿ ನಡೆಯುತ್ತಿದ್ದು 15-20 ದಿನಗಳಿಂದ ದಿನಕ್ಕೆ 5-6 ಟ್ಯಾಂಕ್‍ರ್ ನೀರನ್ನು ಶ್ರೀ ಭೈರವೇಶ್ವರದೇವಸ್ಥಾನದಕಿರು ನೀರು ಸರಬರಾಜು ಸಿಸ್ಟನ್‍ನಿಂದ ನೀರನನ್ನುತುಂಬಿಕೊಂಡು ಹೋಗುತ್ತಾರೆ.ಟ್ಯಾಂಕರ್‍ಚಾಲಕನನ್ನು ಕೇಳಿದರೆ ಗ್ರಾಮಪಂಚಾಯಿತಿ ಅಧಿಕಾರಿಗಳು ನಮ್ಮಗುತ್ತಿಗೆದಾರರಿಗೆಅನುಮತಿಕೊಟ್ಟಿದ್ದು ಬೀಗದ ಕೀ ಕೊಟ್ಟು ನಿಮಗೆ ಬೇಕಾದಾಗ ನೀರನ್ನು ಬಳಸಿಕೊಳ್ಳು ಎಂದು ತಿಳಿಸಿದನು. ಸರ್ಕಾರದಿಂದ ಲಕ್ಷಾಂತರ ರೂಗಳಿಗೆ ಗುತ್ತಿಗೆ ಪಡೆದುರಸ್ತೆಗೆ ನೀರನ್ನು ಮಾತ್ರ ಸರ್ಕಾರದಿಂದಲೇ ಬಳಸಿಕೊಳ್ಳಲು ಅನುಮಾಡಿಕೊಟ್ಟಿರುವ ಅಧಿಕಾರಿಗಳನ್ನು ಕೇಳಿದರೆ ಒತ್ತಡದ ಪರಿಸ್ಥಿತಿಯಲ್ಲಿ ಕೊಟ್ಟಿದ್ದಾರೆಂದುಗ್ರಾ.ಪಂ ಸದಸ್ಯರೊಬ್ಬರು ಹೇಳಿದ್ದಾರೆ.
ಜನರಿಗೆಕುಡಿಯಲು ನೀರಲಿಲ್ಲದೇಇದ್ದರು ಪರವಾಗಿಲ್ಲರಸ್ತೆಕಾಮಗಾರಿ ಮಾಡುವಗುತ್ತಿಗೆದಾರನಿಗೆ ಮಾತ್ರ ರತ್ನಗಂಬಳಿಯನ್ನು ಹಾಕಿ ನೀರುಕೊಡುತ್ತಿರುವಗ್ರಾಮ ಪಂಚಾಯಿತಿ ಅಧಿಕಾರಿಗಳವಿರುದ್ದ ಗ್ರಾಮಸ್ಥರು ಆರೋಪಿಸಿದ್ದು ನೀರನ್ನು ಬಳಸಿಕೊಳ್ಳುತ್ತಿರುವ ಗುತ್ತಿಗೆದಾರರ ವಿರುದ್ಧಕ್ರಿಮಿನಲ್‍ಕೇಸ್‍ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
