ಚಳ್ಳಕೆರೆ
ತಾಲ್ಲೂಕಿನ ಜಾಜೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಕಾಮಸಮುದ್ರ ಗ್ರಾಮದಲ್ಲಿ ಶನಿವಾರ ಬೆಳ್ಳಂಬೆಳಗ್ಗೆಯೇ ವ್ಯಕ್ತಿಯೊಬ್ಬನ ಕೊಲೆಯಾಗಿದ್ದು, ಕೊಲೆಯಾದವನನ್ನು ಅದೇ ಗ್ರಾಮದ ತಿಪ್ಪೇಶ(32) ಎಂದು ಗುರುತಿಸಲಾಗಿದ್ದು, ಮೃತನ ಪತ್ನಿ ಅಬಿಂಕಾ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ಕ್ರಮ ಕೈಗೊಂಡಿದ್ಧಾರೆ.
ಕಾಮಸಮುದ್ರ ಗ್ರಾಮದ ದಿನ್ನೆಯ ಶಿವಲಿಂಗಪ್ಪನವರ ಜಮೀನ ಬಳಿ ತಿಪ್ಪೇಶನ ಶವ ದೊರಕಿದ್ದು, ನನ್ನ ಗಂಡನ ಕೊಲೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿರುವ ಅಂಬಿಕಾ, ನನ್ನ ಗಂಡ ಜುಲೈ 17ರ ಸಂಜೆ 5ರ ಸಮಯದಲ್ಲಿ ಹೋಳಿಗೆಯಮ್ಮನಿಗೆ ಎಡೆ ಇಟ್ಟುಬರುತ್ತೇನೆಂದು ಹೋಗಿದ್ದು,
ಜುಲೈ 18ರ ಶನಿವಾರ ಬೆಳಗ್ಗೆ ಗ್ರಾಮದ ಯುವಕನೊಬ್ಬ ಆಗಮಿಸಿ ತಿಪ್ಪೇಶ ಹೆಣವಾಗಿ ರಸ್ತೆ ಬದಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದಾಗ ನಾನು ಹಾಗೂ ನನ್ನ ಸಂಬಂಧಿಗಳು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ಕುತ್ತಿಗೆ ಹಾಗೂ ಮುಖದ ಮೇಲೆ ರಕ್ತದ ಕಲೆ ಇದ್ದು, ಇದು ಕೊಲೆಯಾಗಿದ್ದು, ನನ್ನ ಗಂಡ ಗ್ರಾಮದ ಮತ್ತೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಎಂಬ ಶಂಕೆ ವಿಚಾರದಲ್ಲಿ ಅದೇ ಗ್ರಾಮದ ನಾಗರಾಜ ಎಂಬುವವನ್ನು ನನ್ನ ಗಂಡನನ್ನು ಸಾಯಿಸುವ ಬೆದರಿಕೆ ಹಾಕಿದ್ದ ಎಂದು ತಿಳಿಸಿ ಗಂಡ ಕೊಲೆಗೆ ನಾಗರಾಜನೇ ಕಾರಣ ಎಂದು ಆರೋಪಿಸಿದ್ದಾಳೆ.
ಜಿಲ್ಲಾ ರಕ್ಷಣಾಧಿಕಾರಿಗಳ ಭೇಟಿ
ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕ, ಹೆಚ್ಚುವರಿ ರಕ್ಷಣಾಧಿಕಾರಿ ಮಹಲಿಂಗ ನಂದಗಾವಿ, ಡಿವೈಎಸ್ಪಿ ಕೆ.ವಿ.ಶ್ರೀಧರ್, ವೃತ್ತ ನಿರೀಕ್ಷಕ ಈ.ಆನಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಪರಶುರಾಪುರ ಸರ್ಕಾರ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಪರಶುರಾಮಪುರ ಪಿಎಸ್‍ಐ ಮಹೇಶ್ ಲಕ್ಷ್ಮಣ್ ಹೊಸಪೇಟ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ