ರೆಸ್ಪಿರೇಟರ್ ಹೊಂದಿರುವ ಎನ್-95 ಮಾಸ್ಕ್ ಧರಿಸುವುದು ಎಷ್ಟು ಸರಿ..?

ನವದೆಹಲಿ:

     ಜನರು ಕವಾಟ(ವ್ಯಾಲ್ವ್ ) ಗಳಿರುವ ಎನ್ -95 ಮಾಸ್ಕ್ ಗಳನ್ನು ಬಳಸುವುದರ ಬಗ್ಗೆ ಎಚ್ಚರಿಕೆ ನೀಡುವಂತೆ ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಮತ್ತು ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ “ಹಾನಿಕಾರಕ” .

     ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ವಿಶೇಷವಾಗಿ ಎನ್ -95 ಮುಖವಾಡಗಳ “ಅನುಚಿತ ಬಳಕೆ” ಇರುವುದನ್ನು ಗಮನಿಸಲಾಗಿದೆ.

    ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮುಖ ಮತ್ತು ಬಾಯಿಗೆ ಮನೆಯಲ್ಲಿ ತಯಾರಿಸಿದ ಮಾಸ್ಕ್ ಬಳಸಲು  ಸಲಹೆ ನೀಡಲಾಗಿದೆ . “ಕವಾಟದ N-95 ಮುಖ ಗವಸುಗಳ ಬಳಕೆಯು ಕರೋನವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳಿಗೆ ಹಾನಿಕಾರಕವಾಗಿದೆ ಎಂದು ನಿಮ್ಮ ಜ್ಞಾನಕ್ಕೆ ತರಲಾಗಿದೆ  ಏಕೆಂದರೆ ಇದು ಕೊರೋನಾ ವೈರಾಣುಗಳು ಉಸಿರಾಟದ ಕವಾಟಗಳಿಂದ ನಮ್ಮ ಮುಖಗವಸಿನ ಒಳಗಡೆ ಪ್ರವೇಶಿವುದನ್ನು ತಡೆಯಲು ವಿಫಲವಾಗುತ್ತದೆ.ಮೇಲೆ ತಿಳಿಸಿರುವಂತೆ ವೈದ್ಯರು ಮತ್ತು ಕೊರೋನಾ ವಾರಿಯರ್ಸ್ ಹೊರತುಪಡಿಸಿ ಬೇರೆ ಯಾರಾದರೂ ವೈದ್ಯಕೀಯ ದರ್ಜೆಯ ಎನ್ 95 ಮಾಸ್ಕ್ ಗಳನ್ನು ಧರಿಸ ಬಾರದು ಎಂದು ಕೂಡ ಸಚಿವಾಲಯ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link