ಶಿರಾ
ಬೆಂಗಳೂರಿನಿಂದ ಶಿರಾ ನಗರಕ್ಕೆ ಆಗಮಿಸಿದ್ದ ಹುಳಿಗೆರೆಯ ಇಬ್ಬರು ದಂಪತಿಗಳು ಸೇರಿದಂತೆ ಜುಲೈ 21 ರ ಮಂಗಳವಾರ ತಾಲ್ಲೂಕಿನಲ್ಲಿ ಒಟ್ಟು 6 ಕೊರೋನಾ ಸೋಂಕಿನ ಪ್ರಕರಣಗಳು ಕಂಡು ಬಂದಿವೆ.
ಶಿರಾ ವಿದ್ಯಾ ನಗರದ 35 ವರ್ಷದ ವ್ಯಕ್ತಿ, ಕಿಲಾರದಹಳ್ಳಿ ತಾಂಡಾ 50 ವರ್ಷದ ಮಹಿಳೆ, ಚಿಕ್ಕಸಂದ್ರ ಕಾವಲ್‍ನ 45 ವರ್ಷದ ಪುರುಷ ಹಾಗೂ ಜೋಗಯ್ಯನ ಪಾಳ್ಯದ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಕಿಲಾರದಹಳ್ಳಿ ತಾಂಡಾ ಗ್ರಾಮದ ಮಹಿಳೆಗೆ ಯಾವುದೇ ಟ್ರ್ಯಾವೆಲ್ ಹಿಸ್ಟರಿ ಇಲ್ಲ. ಈಕೆ ಮನೆಯಿಂದ ಜಮೀನಿಗೆ ಹೋಗಿ ಬರುತ್ತಿದ್ದುದನ್ನು ಬಿಟ್ಟರೆ ಯಾವುದೇ ಗ್ರಾಮಕ್ಕೂ ಈಕೆ ಹೋಗಿ ಬಂದಿಲ್ಲವಾದರೂ ಆಕೆಗೆ ಸೋಂಕು ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ ಎನ್ನಲಾಗಿದೆ
ಸೋಂಕು ಕಂಡು ಬಂದ ಎಲ್ಲಾ ಗ್ರಾಮಗಳು ಹಾಗೂ ಬಡಾವಣೆಗಳಿಗೆ ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್‍ಕುಮಾರ್ ಭೇಟಿ ನೀಡಿದ್ದರು. ಸೋಂಕಿತರ ಎಲ್ಲಾ ಪ್ರದೇಶಗಳ 50 ಮೀ. ವ್ಯಾಪ್ತಿಯನ್ನು ಕಂಟೈನ್‍ಮೆಂಟ್ ಝೋನ್‍ಗೆ ಒಳಪಡಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ