ಶ್ರೀನಗರ :
ಜಮ್ಮುಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ಬೃಹತ್ ಜಾಲ ಪತ್ತೆಯಾಗಿದ್ದು, ಪೊಲೀಸರು ಸುಮಾರು 50 ಕೋಟಿ ರೂ. ಬೆಲೆ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಚೋ ಜಿನಾಪುರಾ ಶೋಪಿಯಾನ್ ಉದ್ಯಾನವೊಂದರಲ್ಲಿ ಎಲ್ಇಟಿ ಉಗ್ರರು ಇರುವ ಬಗ್ಗೆ ಖಚಿತ ಮಾಹಿತಿ ಮೇಲೆ ಭದ್ರತಾ ಪಡೆಗಳು ಸ್ಥಳೀಯ ಪೊಲೀಸ್ ಪಡೆಗಳು, 44 ಸೇನಾ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ನ 178 ಬೆಟಾಲಿಯನ್ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆ ಪತ್ತೆ ಹಚ್ಚಿದ್ದಾರೆ.
ದುಷ್ಕರ್ಮಿಗಳಿಂದ 10 ಕೆಜಿ ಬ್ರೌನ್ ಶುಗರ್, ಮದ್ದುಗುಂಡ ಮತ್ತು ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಖಚಿತ ಮಾಹಿತಿ ಹಾಗೂ ಸೇನೆಯ ಮೂಲಕ ತಂಗ್ ದರ್ ಸಮೀಪದ ಸದ್ನಾ ಪಾಸ್ ಬಳಿ ಇದ್ದ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಬಷೀರ್ ಅಹ್ಮದ್ ಶೇಕ್ ಮತ್ತು ಅಬ್ದುಲ್ ಅಮಿತ್ ಶೇಕ್ ಎಂದು ಇಬ್ಬರನ್ನು ಗುರುತಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ