ಬೆಂಗಳೂರು :
ಸರ್ಕಾರದ ಮೆಡಿಕಲ್ ಕಿಟ್ ಹಗರಣ ಕುರಿತಂತೆ ತನಿಖೆ ನಡೆಸುವಂತೆ ಒತ್ತಾಯಿಸಿ, ಕೆಪಿಸಿಸಿ ನಿಯೋಗ ರಾಜಭವನಕ್ಕೆ ತೆರಳಿ, ರಾಜ್ಯಪಾಲರನ್ನು ಭೇಟಿ ಮಾಡಿ, ಮನವಿ ಮಾಡುವುದನ್ನು ತಡೆದ ಪೊಲೀಸರು, ಕೈ ಮುಖಂಡರನ್ನು ಬಂಧಿಸಿದ್ದಾರೆ.
ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ಬೃಹತ್ ಪ್ರತಿಭಟನೆ ಮೂಲಕ ಬಿಜೆಪಿ ನೇತೃತ್ವದ ಸರ್ಕಾರದ ಮೆಡಿಕಲ್ ಕಿಟ್ ಖರೀದಿ ಹಗರಣವನ್ನು ತನಿಖೆಗಾಗಿ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಕಾಂಗ್ರೆಸ್ ಕಚೇರಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗ ರಾಜಭವನಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ಹಗರಣವನ್ನು ತನಿಖೆಗೆ ಒತ್ತಾಯಿಸುವಂತೆ ಮನವಿ ಮಾಡಲು ತೆರಳುತ್ತಿತ್ತು. ಆದ್ರೇ ಇಂತಹ ಕೈ ನಾಯಕರನ್ನು ದಾರಿ ಮಧ್ಯದಲ್ಲಿಯೇ ತಡೆದು ಬಂಧಿಸಿದ್ದಾರೆ.
ರಾಜ್ಯ ಪಾಲರ ಭೇಟಿಗೆ ಅನುಮತಿ ಇಲ್ಲ. ಹೀಗಿದ್ದೂ ಲಾಕ್ ಡೌನ್ ನಿಯಮವನ್ನು ಮೀರಿ ಪ್ರತಿಭಟನೆ, ಮೆರವಣಿಗೆ ನಡೆಸುವುದಕ್ಕೆ ಅವಕಾಶವಿಲ್ಲ. ಹೀಗಿದ್ದಾಗ್ಯೂ ಪ್ರತಿಭಟನೆ ನಡೆಸುತ್ತಾ, ರಾಜ್ಯಪಾಲರ ಭೇಟಿಗೆ ತೆರಳುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ