57 ಕೆರೆಗಳಿಗೆ ನೀರು ತುಂಬಿಸುವ ಪೈಪ್‍ಲೈನ್ ಕಳಪೆ ಕಾಮಗಾರಿ

ಜಗಳೂರು:

     640 ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಪೈಪ್‍ಲೈನ್ ಕಾಮಗಾರಿ ಜಗಳೂರು ಮಾರ್ಗವಾಗಿ ನಡೆಯುತ್ತಿದ್ದು ಪೈಪ್ ಲೈನ್‍ಕಾಮಗಾರಿ ಕಳಪೆ ಮಟ್ಟದಿಂದ ನಡೆಯುತ್ತಿರುವ ಬಗ್ಗೆ ರೈತರಲ್ಲಿ ಆತಂಕ ಮೂಡಿಸಿದೆ.ಹಿನ್ನಲೆಯಲ್ಲಿ ಮತ್ತೊಮ್ಮೆ ಮುಚ್ಚಿರುವ ಪೈಪ್ ಲೈನ್ ತೆಗೆದು ಪುನ: ಪೈಪ್ ಲೈನ್ ಕನೆಕ್ಷನ್ ಸ್ಥಳದಲ್ಲಿ ಮತ್ತೊಮ್ಮೆ ವೆಲ್ಡಿಂಗ್ ಮಾಡಿ, ಜಾಲರಿ ಹಾಕಿ ಸಿಮೆಂಟ್ ಮಾಡುತ್ತಿರುವ ಘಟನೆ ನಡೆದಿದೆ.

      ಬಿಳಿಚೋಡು, ಮೆದಕೇರನಹಳ್ಳಿ, ಮೆದಗಿನಕೆರೆ ವಯಾ ಜಗಳೂರು ಕಡೆ ಸುಮಾರು ಆರೇಳು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ದೊಡ್ಡಮಟ್ಟದಲ್ಲಿ ಪೈಪ್ ಲೈನ್ ಕಾಮಗಾರಿ ಮಾಡಿ ಮುಚ್ಚಿದ್ದರು. ಇನ್ನು ಒಂದು ವರ್ಷದಲ್ಲಿ ನೀರು ಬರಬಹುದು ರೈತರು ಅಂದುಕೊಂಡು ಸಂತಸ ವ್ಯಕ್ತಪಡಿಸಿದ್ದರು. ಇದಲ್ಲದೇ ನೀರಾವರಿ ಹೋರಾಟ ಸಮಿತಿ ಸದಸ್ಯರು ಆದ ಕೆ.ಬಿ.ಕಲ್ಲೇರುದ್ರೇಶ್ ಅನೇಕ ಬಾರಿ ಪತ್ರಿಕಾಗೋಷ್ಠಿ ಕರೆದು ,ಕಳಪೆ ಕಾವiಗಾರಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದ್ದು ,ಕಾಮಗಾರಿ ಸ್ಥಳಕ್ಕೂ ಮಾಧ್ಯಮದವರನ್ನು ಕರೆದುಕೊಂಡು ಹೋಗಿದ್ದರು.

     ಇಷ್ಟಾದರೂ ಸಹ ಸಂಬಂಧಿಸಿದ ಇಂಜಿನಿಯರ್ ಆಗಲಿ, ಗುತ್ತಿಗೆದಾರರಾಗಲಿ ಗುಣಮಟ್ಟದ ಕಾಮಗಾರಿಯ ಬಗ್ಗೆ ಒತ್ತು ನೀಡದೆ ಇರುವುದನ್ನು ಗಮನಿಸಿ ಉನ್ನತ ಮಟ್ಟದ ಪೈಪ್‍ಲೈನ್ ಮಾಡುವ ತಜ್ಞರನ್ನು ಕರೆಯಿಸಿ ರೈತರೊಂದಿಗೆ ಕೆ.ಬಿ. ಕಲ್ಲೇರುದ್ರೇಶ್ ಚರ್ಚಿಸಿದ ಹಿನ್ನಲೆಯಲ್ಲಿ ಗುತ್ತಿಗೆದಾರರು ಮತ್ತೊಮ್ಮೆ ಮುಚ್ಚಿರುವ ಕಾಮಾಗಾರಿ ತೆಗೆಯಿಸಿ ಮತ್ತೊಮ್ಮೆ ಉತ್ತಮ ಕಡ್ಡಿಯಿಂದ ವೆಲ್ಡಿಂಗ್ ಮಾಡಿಸಿ, ಜಾಯಿಂಟ್ ಸ್ಥಳಕ್ಕೆ ಜಾಲರಿ ಹಾಕಿ ಸಿಮೆಂಟ್ ಮಾಡುತ್ತಿರುವ ದೃಷ್ಯವನ್ನು ಮಾಧ್ಯಮದವರಿಗೆ ಕಲ್ಲೇರುದ್ರೇಶ್ ತೋರಿಸುವ ಮೂಲಕ ಸೋಮವಾರ ಮಾಹಿತಿ ಹಂಚಿಕೊಂಡರು.

      ನಂತರ ಕೆ.ಬಿ.ಕಲ್ಲೇರುದ್ರೇಶ್‍ಪತ್ರಕರ್ತರೊಂದಿಗೆಮಾತನಾಡಿದ ಅವರು ಸಿರಿಗೆರೆಯ ಡಾ||ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳ ಒತ್ತಾಯದ ಹಿನ್ನಲೆ ಬರದನಾಡು ಜಗಳೂರು ತಾಲ್ಲೂಕುನ ಕೆರೆಗಳಿಗೆ ನೀರು ತುಂಬಿಸಿ ಹಸಿರುನಾಡು ಮಾಡಬೇಕೆಂಬ ಆಶಯದೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್, ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಹಾಗೂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಕಾಲ ಗಟ್ಟಗಳಿಗೆ ಅನುಗುಣವಾಗಿ ಒತ್ತಡ ತಂದು 640 ಕೋಟಿ ರೂ.ತಂದಿರುವುದು ಸಾರ್ಥಕವಾಗಬೇಕು.

     ದಾವಣಗೆರೆ ವ್ಯಾಪ್ತಿಯ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಪದೇ ಪದೇ ಪೈಪ್ ಲೈನ್ ಒಡೆದು ಕೆರೆಗಳಿಗೆ ನೀರು ಬಾರದಂತಾಗಬಾರದೆಂಬ ದೂರ ದೃಷ್ಟಿ ಹಿಟ್ಟುಕೊಂಡು ಆಯಾ ಭಾಗದ ವ್ಯಾಪ್ತಿಯ ಯುವಕರನ್ನು ಒಂದೊಂದು ಕಿಲೋ ಮೀಟರ್ ವ್ಯಾಪ್ತಿಯ ಜವಾಬ್ದಾರಿಯನ್ನು ನೀಡಲಾಗುವುದು. ಸಾರ್ವಜನಿಕರಿಗೂ ಅಂದಾಜುವೆಚ್ಚದೊಂದಿಗೆ ಗುಣ ಮಟ್ಟದ ಕಾಮಗಾರಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕಳಪೆ ಕಾಮಗಾರಿಗೆ ನಾನು ಯಾವ ರಾಜಕಾರಣಿ, ಗುತ್ತಿಗೆದಾರರು,ಇಂಜಿನಿಯರ್‍ರನ್ನು ದೂರುವುದಿಲ್ಲ ಕಳಪೆ ಕಾಮಗಾರಿಯಾಗಲು ತಾಲ್ಲೂಕಿನ ಯುವಕರು, ರೈತರಾದ ನಾವೆ ಕಾರಣವೆಂದು ಅವರು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಬಿಳಿಚೋಡು ರೈತಮುಖಂಡರಾದ ರಂಗಸ್ವಾಮಿ, ಕೆಚ್ಚೇನಹಳ್ಳಿ ಸಂಪತ್‍ಕುಮಾರ್, ಚಂದ್ರಪ್ಪ, ಮಹೇಶ್, ಗೋವಿಂದಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link