ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ

ದಾವಣಗೆರೆ:

     ಕೆಲಸ ಖಾಯಂ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್‍ಎಚ್‍ಎಂ) ಯೋಜನೆ ಅಡಿಯಲ್ಲಿ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವವರು ಮಂಗಳವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

    ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಸಿಐಟಿಯು ಸಂಯೋಜಿತ ಎನ್‍ಹೆಚ್‍ಎಂ ಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರುಗಳಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ, ಶುಶ್ರೂಷಕಿಯರ, ಪ್ರಯೋಗಶಾಲ ತಂತ್ರಜ್ಞರ, ನೇತ್ರ ಅಧಿಕಾರಿಗಳ ಮತ್ತು ಫಾರ್ಮಾಸಿಸ್ಟ್‍ಗಳು ಸೇವೆ ಸ್ಥಗಿತ ಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿ, ಬೇಡಿಕೆ ಈಡೇರುವ ವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಸಂಚಲಕ ಕೆ.ಎಚ್.ಆನಂದರಾಜ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

    ಕೆಲಸ ಖಾಯಂ ಮಾಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಎಲ್ಲಾ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ಎಲ್ಲಾ ಹುದ್ದೆಗಳಿಗೆ ಸ್ಥಾಯಿ ಆದೇಶ ಕೊಡ ಬೇಕು. ಅಂದರೆ, ಕೆಲಸದ ನಿಯಮಾವಳಿಗಳನ್ನ ನಿರ್ದೇಶಿಸುವ ಮೂಲಕ ನೌಕರರಿಗೆ ಕೆಲಸದ ಒತ್ತಡ ನಿವಾರಿಸಬೇಕು. ರಜಾ ದಿನದಲ್ಲಿ ಕೆಲಸ ಮಾಡಿದವರಿಗೆ ಪರಿಹಾರ ರಜೆ ಅಥವಾ ಹೆಚ್ಚುವರಿ ವೇತನ ಕೊಡಬೇಕು. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ನಿವಾರಣಾ ಸಮಿತಿ ರಚಿಸಬೇಕು.

    ಕೋವಿಡ್ ವಿಶೇಷ ಭತ್ಯೆಯನ್ನಾಗಿ ತಿಂಗಳಿಗೆ 25000 ರೂ. ನೀಡಬೇಕು. ಕೆಲಸ ಮಾಡುವಾಗ ಮೃತಪಟ್ಟರೇ(ಕೊವೀಡ್ ಅಲ್ಲದೇ) ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಬೇಕು. ಮೂರು ತಿಂಗಳಿಗಾಗಿ ಜಾರಿಗೊಳಿಸಿದ್ದ ವಿಮಾ ಸೌಲಭ್ಯವನ್ನು 12 ತಿಂಗಳಿಗೆ ವಿಸ್ತರಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಮ್ಮ ಕೆಲಸದ ಪ್ರದೇಶಕ್ಕೆ ಹೋಗಿಬರಲು ವಾಹನದ ಸೌಕರ್ಯ ಅಥವಾ ಇಂಧನ ಭತ್ಯೆ ಕೊಡಬೇಕು. ಜಿಲ್ಲಾ ಆಸ್ಪತ್ರೆಗಳ ಖಾಸಗೀಕರಣದ ಪ್ರಸ್ಥಾವನೆಯನ್ನ ತಕ್ಷನವೇ ವಾಪಾಸ್ ಪಡೆಯಬೇಕೆಂದು ಮುಷ್ಕರನಿರತ ಎನ್‍ಎಚ್‍ಎಂ ನೌಕರರು ಆಗ್ರಹಿಸಿದರು.

   ಮುಷ್ಕರದ ನೇತೃತ್ವವನ್ನು ಹುಲಿಗಮ್ಮ, ಶ್ವೇತಾ, ಸುಶೀಲ, ಖಾಜಾಮೈನುದ್ದೀನ್, ಪ್ರಶಾಂತ್ ಕುಮಾರ್ ಎಂ.ಎನ್., ತಿಪ್ಪೇಸ್ವಾಮಿ ವೈ., ಶಾಹಾನಾಜ್, ಉಮಾಭಾಯಿ, ಲೀಲಾವತಿ, ಶೋಭ ವಿ., ಪದ್ಮ ಟಿ., ಗಣೇಶ್ ಸಿ., ಬಸವರಾಜಯ್ಯ ಟಿ. ಮತ್ತಿತರರು ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link