ಬೆಂಬಲ ಬೆಲೆಗೆ ನೆಫೆಡ್ ನಿಂದ ಕೊಬ್ಬರಿ ಖರೀದಿ ಆರಂಭ

ಚಿಕ್ಕನಾಯಕನಹಳ್ಳಿ

     ಕೊಬ್ಬರಿ ಬೆಲೆ ತೀವ್ರ ಕುಸಿತದ ಹಿನ್ನಲೆಯಲ್ಲಿ ರೈತರಿಂದ ಕೊಬ್ಬರಿ ಖರೀದಿಸಲು ಸರ್ಕಾರ ನ್ಯಾಫೆಡ್ ಕೇಂದ್ರವನ್ನು ತೆರೆದು ಕ್ವಿಂಟಾಲ್ ಕೊಬ್ಬರಿಗೆ 10300 ನಿಗಧಿ ಪಡಿಸಿ ಖರೀದಿ ಆರಂಭಿಸಿದೆ.

     ಬುಧವಾರದಿಂದ ಪಟ್ಟಣದಲ್ಲಿ ಕೊಬ್ಬರಿ ಖರೀದಿಸುತ್ತಿರುವ ನ್ಯಾಫೆಡ್ ಕೇಂದ್ರ, ರೈತರಿಂದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ನಿಗಧಿ ಪಡಿಸಿರುವ ಬೆಲೆಯಂತೆ ಪಟ್ಟಣದ ಎಪಿಎಂಸಿ ಯಾರ್ಡ್ ಬಳಿ ಕೊಬ್ಬರಿ ಖರೀದಿಸಲಾಗುತ್ತಿದೆ.ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ತೀವ್ರ ಕುಸಿತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ 2020 -21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೇರವಾಗಿ ಉತ್ತಮ ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ನ್ಯಾಫೆಡ್ ಸಂಸ್ಥೆಯವರು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದ್ದಾರೆ.

      ಅದೇ ರೀತಿ ಚಿಕ್ಕನಾಯಕನಹಳ್ಳಿ ಪಟ್ಟಣದ ಎಪಿಎಂಸಿ ಯಾರ್ಡ್ ಬಳಿಯ ದಾಸ್ತಾನುವಿನಲ್ಲಿ ಕೊಬ್ಬರಿ ಖರೀದಿಸಲಾಗುತ್ತಿದೆ, ಪ್ರತಿ ರೈತರಿಂದ ಎಕರೆಗೆ 6 ಕ್ವಿಂಟಾಲ್ ರಂತೆ ಗರಿಷ್ಠ 20 ಕ್ವಿಂಟಾಲ್ ಖರೀದಿಸಲಾಗುವುದು.ಕೊಬ್ಬರಿ ಖರೀದಿಸಲು ರೈತರಿಂದ ನ್ಯಾಫೆಡ್ ಕೇಂದ್ರಗಳಿಗೆ ನೊಂದಾಯಿಸಿಕೊಳ್ಳಲು ಈ ಮುಂಚೆಯೇ ತಿಳಿಸಲಾಗಿತ್ತು, ಈಗಾಗಲೇ ಜುಲೈ 25ಕ್ಕೆ ರಿಜಿಸ್ಟ್ರೇಷನ್ ಕೊನೆಗೊಂಡಿದ್ದು ಇಲ್ಲಿಯವರೆಗೆ 203 ರೈತರು ಚಿ.ನಾ.ಹಳ್ಳಿ ನ್ಯಾಫೆಡ್ ಕೇಂದ್ರದಲ್ಲಿ ನೊಂದಾಯಿಸಿಕೊಂಡಿದ್ದಾರೆ, ಜುಲೈ 29ರಿಂದ ಕೊಬ್ಬರಿ ಖರೀದಿ ಆರಂಭಗೊಂಡಿದೆ.

    ಕೇಂದ್ರ ಸರ್ಕಾರದ ಅನ್ವಯದಂತೆ ಕೊಬ್ಬರಿ ಬೆಲೆಗೆ 10.300 ರೂ ನಿಗಧಿಪಡಿಸಿದ್ದು ರಾಜ್ಯ ಸರ್ಕಾರ ಯಾವುದೇ ರೀತಿಯ ಬೆಲೆ ನಿಗಧಿಪಡಿಸಿಲ್ಲ, ಕಳೆದ ವರ್ಷ ಜುಲೈ ತಿಂಗಳ ವೇಳೆಗೆ ಕೊಬ್ಬರಿ 17ಸಾವಿರ ಬೆಲೆ ಇತ್ತು, ಆದರೆ ಕೋವಿಡ್-19 ಪರಿಣಾಮವಾಗಿ ಕೊಬ್ಬರಿ ಬೆಲೆ ಕುಸಿದಿದೆ. ಕಳೆದ ತಿಂಗಳು 9ಸಾವಿರಕ್ಕೆ ಕೊಬ್ಬರಿ ಬೆಲೆ ಇಳಿದಿತ್ತು ಈ ಹಿನ್ನೆಲೆಯಲ್ಲಿ ಸರ್ಕಾರ ರೈತರಿಂದ ಕೊಬ್ಬರಿ ಖರೀದಿಸಲು ಖರೀದಿ ಕೇಂದ್ರ ತೆರೆಯಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link