ಕೊರೊನಾಗೆ ತುತ್ತಾದ ಜಗತ್ತಿನ ಮೊದಲ ನಾಯಿ ಸಾವು!!

ನ್ಯೂಯಾರ್ಕ್ :

      ಕೊರೊನಾ ವೈರಸ್ ಗೆ ತುತ್ತಾಗಿದ್ದ ಜಗತ್ತಿನ ಮೊದಲ ನಾಯಿ ನ್ಯೂಯಾರ್ಕ್ ನ ಜರ್ಮನ್ ಷೆಫರ್ಡ್ ಸಾವನ್ನಪ್ಪಿದೆ.

      ರಾಬರ್ಟ್ ಹಾಗೂ ಅಲಿಸನ್  ಹಲವಾರು ವಾರಗಳಿಂದ ಕೊರೋನಾವೈರಸ್ ‌ನಿಂದ ಬಳಲುತ್ತಿದ್ದರು. ಈ ನಡುವೆ  ಏಪ್ರಿಲ್ ಮಧ್ಯದಲ್ಲಿ ತಮ್ಮ 7 ವರ್ಷದ ಷೆಫರ್ಡ್ ಗೆ ಸಹ ಉಸಿರಾಟದ ತೊಂದರೆಗಳು ಕಾಣಿಸಿದ್ದವು ಎಂದು ಸ್ಟೇಟನ್ ದ್ವೀಪದ ನಿವಾಸಿಗಳು ನ್ಯಾಷನಲ್ ಜಿಯಾಗ್ರಫಿಕ್‌ಗೆ ತಿಳಿಸಿದರು.

     ಪಶುವೈದ್ಯರು ಮೇ ತಿಂಗಳಲ್ಲಿ ನಾಯಿಯನ್ನು ಪರೀಕ್ಷಿಸಿದಾಗ ನಾಯಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ರಕ್ತ ಹೆಪ್ಪುಗಟ್ಟುವಿಕೆ, ವಾಂತಿಯಂತಹ ಸಮಸ್ಯೆ ಕಾಣಿಸಿದ ಬಳಿಕ ಜುಲೈ 11 ರಂದು ನಾಯಿಯನ್ನು ದಯಾಮರಣಕ್ಕೆ ಒಳಪಡಿಸಲಾಗಿತ್ತು.

      ನಾಯಿಯ  ಸಾವಿನಲ್ಲಿ ಕರೋನವೈರಸ್ ಪಾತ್ರವಹಿಸುತ್ತದೆಯೇ ಎಂಬುದು ತಿಳಿದಿಲ್ಲ. ರಕ್ತ ಪರೀಕ್ಷೆ ನಾಯಿಯು ರೋಗನಿರೋಧಕ ವ್ಯವಸ್ಥೆಯ ಕ್ಯಾನ್ಸರ್ ಲಿಂಫೋಮಾವನ್ನು ಹೊಂದಿರಬಹುದು ಎಂದು ಪಶುವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ.

      ಇನ್ನು ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ವಕ್ತಾರರು ನಾಯಿಯ ದೇಹವನ್ನು ನೆಕ್ರೋಪ್ಸಿಗಾಗಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪಶುವೈದ್ಯರೊಂದಿಗೆ ವಿವರ ಹಂಚಿಕೊಂಡಿದ್ದ ವೇಳೆ ನಾಯಿಯ ದೇಹವನ್ನು ಈಗಾಗಲೇ ದಹನ ಮಾಡಿರುವುದು ಪತ್ತೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link