ಕೌಟುಂಬಿಕ ಕಲಹ : ಇಬ್ಬರು ಮಕ್ಕಳ ಜೊತೆ ಕೆರೆಗೆ ಹಾರಿದ ತಾಯಿ!!

ಚಿಕ್ಕಮಗಳೂರು:

     ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹುಣಸೇಕೊಪ್ಪ ಗ್ರಾಮದಲ್ಲಿ ನಡೆದಿದೆ.

      ಹುಣಸೇಕೊಪ್ಪದ ಲಕ್ಷ್ಮಿ(35), ಸೌಜನ್ಯ(5) ಹಾಗೂ 2 ವರ್ಷದ ಆದ್ಯಾ ಮೃತ ದುರ್ದೈವಿಗಳು.

      ಕಳೆದ ನಾಲ್ಕು ದಿನಗಳಿಂದ ತಾಯಿ, ಮಕ್ಕಳು ನಾಪತ್ತೆಯಾಗಿದ್ದರು. ನಿನ್ನೆ ಹುಣಸೇಕೊಪ್ಪದ ಕಾಫಿ ತೋಟವೊಂದರ ಕೆರೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಎರಡು ಪುಟ್ಟ ಮಕ್ಕಳ ಮೃತದೇಹವನ್ನ ಕಂಡ ಸ್ಥಳೀಯರು ಕೂಡ ಕಣ್ಣೀರಿಟ್ಟಿದ್ದಾರೆ. 

      ಪದೇ ಪದೇ ಲಕ್ಷ್ಮಿ ತವರು ಮನೆಗೆ ಹೋಗುತ್ತಿದ್ದರಿಂದ ಪತಿ ಆಗಾಗ ಜಗಳವಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತು ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

      ಮೃತ ಲಕ್ಷ್ಮಿಯ ಗಂಡನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಮೃತ ಲಕ್ಷ್ಮಿಯ  ಮನೆಯವರು ಗಂಡನ ಕಿರುಕುಳ ಎಂದು ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link