ತುಮಕೂರು:
ಒಂದು ಸಾವಿರ ಅಡಿ ಆಳ ಕೊರೆದರೂ ನೀರು ಸಿಗದ ಈ ಕಾಲಘಟ್ಟದಲ್ಲಿ ಇಲ್ಲೊಂದು ಕಡೆ ಕೇವಲ ನಾಲ್ಕು ಅಡಿಗಳಿಗೆ ನೀರು ಉಕ್ಕಿ ಅತ್ಯಾಶ್ಚರ್ಯ ಉಂಟು ಮಾಡಿರುವ ಪ್ರಸಂಗ ಕಂಡುಬಂದಿದೆ.
ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಜೋನಿಗರಹಳ್ಳಿ ಗ್ರಾಮದ ಜಿ.ವಿ.ಸದಾಶಿವಯ್ಯ ಅವರ ಜಮೀನಿನಲ್ಲಿ ಈ ನೀರು ಕಂಡುಬರುತ್ತಿದೆ. ಕೃಷಿ ಇಲಾಖೆ ವತಿಯಿಂದ ನಿರ್ಮಿಸಿರುವ ಕೃಷಿ ಹೊಂಡ ಸುಮಾರು 15 ಅಡಿ ಆಳ, 6 ಅಡಿ ಅಗಲ ಇದ್ದು, ಇಲ್ಲಿಂದ ಈಗ ಸಮೃದ್ಧಿಯಾಗಿ ನೀರು ಹೊರಬರುತ್ತಿದೆ. ನಾಲ್ಕು ಅಡಿ ನೆಲ ಅಗೆದರೆ ಸಾಕು ನೀರು ಸಿಗುತ್ತದೆ. ಕೃಷಿ ಹೊಂಡದಲ್ಲಿ ಸಂಗ್ರಹವಾಗಿರುವ ನೀರು, ಮಳೆಗಾಲದ ಪರಿಣಾಮವೋ ಏನೋ ಅಂತೂ ಕೆಲವೆ ಅಡಿಗಳ ಅಂತರದಲ್ಲಿ ನೀರು ದೊರಕುತ್ತಿರುವುದು ಆಶ್ಚರ್ಯದ ಜೊತೆಗೆ ಸಂತಸವೂ ಆಗಿದೆ. ಬೇಸಿಗೆ ಕಾಲದಲ್ಲಿ ಇದೇ ಪರಿಸ್ಥಿತಿ ಇರಬಾರದೆ ಎಂಬ ಆಶಯ ಹಲವರದ್ದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
