ಸರುಕ್ಷಿತ ಮತ್ತು ಸರಳವಾಗಿ ಸ್ವಾತಂತ್ರ್ಯೋತ್ಸವ ಆಚರಿಸೋಣ : ಕೆ.ಆರ್.ನಂದಿನಿ

ತಿಪಟೂರು :

    ವಿಶ್ವವನ್ನೇಕಾಡುತ್ತಿರುವಕೊರೋನಾ ಮಧ್ಯೆರಾಷ್ರ್ಟೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯನ್ನುಆಗಸ್ಟ್15 ರಂದು 74ನೇ ಅತ್ಯಂತ ಸರಳವಾಗಿ ಮತ್ತು ಸುರುಕ್ಷಿತವಾಗಿ ಆಚರಿಸೋಣವೆಂದು ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು.

     ನಗರದ ತಾಲ್ಲೂಕು ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿಅವರು ಮಾತನಾಡಿದ ಅವರು ತಾಲ್ಲೂಕು ಕಚೇರಿಯಿಂದ ಎಲ್ಲಾ ಗ್ರಾಮಪಂಚಾಯತ್‍ಗಳಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಬೇಕು. ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ಗಂಟೆಗೆ ಉಪವಿಭಾಗಾಧಿಕಾರಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಳೆದ 4 ತಿಂಗಳಿನಿಂದ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು, ಸ್ಟಾಫ್ ನರ್ಸ್, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಕೊರೋನಾ ವಾರಿಯರ್ಸ್‍ ಮುಖ್ಯವಾಗಿ ಕೊರೊನಾ ಸೋಂಕು ತಗುಲಿ ಗುಣಮುಖರಾದವರಿಗೆ ವಿಶೇಷ ಆಹ್ವಾನವಿದೆ.

     ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೂಲಕ ಪ್ರಸಾರಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು ಸಾರ್ವಜನಿಕರುಜನರು ಮನೆಯಲ್ಲಿಯೇ ಕೂತು ಕಾರ್ಯಕ್ರಮವನ್ನು ವೀಕ್ಷಿಸಬೇಕೆಂದರು.ಮುಖ್ಯವಾಗಿ ಕೊವಿಡ್-19 ರ ಹಿನ್ನಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೇಂದ್ರ ಸರ್ಕಾರ ಮಾರ್ಗ ಸೂಚಿಗಳನ್ನು ಹೊರಡಿಸಿದೆ.ಅದರಂತೆ ಸಾಮಾಜಿಕ ಅಂತರ, ಜನ ಸಂದಣಿ ಇಲ್ಲದಂತೆ ಆಚರಿಸಬೇಕು.ಸ್ವಾತಂತ್ರ್ಯ ದಿನಾಚರಣೆಗೆ ಭಾಗವಹಿಸುವವರು ಮಾಸ್ಕ್ ಧರಿಸಬೇಕು ಹಾಗೂ ಸಂಬಂಧಿಸಿದ ಇಲಾಖೆಯಿಂದ ಸ್ಯಾನಿಟೈಸರ್ ಮತ್ತುಥರ್ಮಾ ಮೀಟರ್ ನಿಂದ ಪ್ರತಿಯೊಬ್ಬರನ್ನು ಪರೀಕ್ಷಿಸಬೇಕುಎಂದು ತಿಳಿಸಿದರು.

    ಶಾಸಕ ಬಿ.ಸಿ.ನಾಗೇಶ್ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಇದುವರೆಗೂ ಮುನ್ನೆಲೆಗೆ ಬಾರದ ಸ್ವಾತಂತ್ರ್ಯಯೋಧರ ಬಗ್ಗೆ ಮಕ್ಕಳಿಗೆ ತಿಳಿಸುವಂತಹ ಕಾರ್ಯಕ್ರಮಗಳಾಗ ಬೇಕು ಮತ್ತುಅಂತಹ ಮಹನೀಯರ ವೇಷವನ್ನು ಹಾಕಿಸಿ ಅವರಿಂದಲೇ ವಿವರಣೆಯನ್ನು ಹೇಳಿಸುವ ಕೆಲಸವನ್ನು ಶಿಕ್ಷಣ ಇಲಾಖೆಯವರು ಮಾಡಬೇಕು. ಮುಖ್ಯವಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ವಾತಂತ್ರ್ಯೋತ್ಸವದಲ್ಲಿ ತಪ್ಪದೇ ಭಾಗವಹಿಸಿಬೇಕು ಮತ್ತು ಸ್ವಾತಂತ್ರ್ಯೋತ್ಸವದ ನಂತರ ಕ್ರೀಡಾಂಗಣವನ್ನು ಸ್ವಚ್ಚಮಾಡಬೇಕು ಇಲ್ಲಿದ್ದಿದ್ದರೆ ನಮ್ಮ ಮಾದ್ಯಮ ಪ್ರತಿನಿಧಿಗಳು ನಮ್ಮನ್ನು ಬಿಡುವುದಿಲ್ಲವೆಂದು ಎಚ್ಚರಿಸಿದರು.

    ಸ್ವಾತಂತ್ರೋತ್ಸವದ ಅಣಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್, ಪೌರಾಯುಕ್ತರು, ಮತ್ತುಎಲ್ಲಾ ಇಲಾಖೆಗಳ ಮುಖ್ಯಸ್ಥರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link