ಬೆಳೆ ಮಾಹಿತಿ ಅಪ್ಲೋಡ್ ; ಖುದ್ದು ವೀಕ್ಷಿಸಿದ ಸಚಿವ ಚವ್ಹಾಣ್!!

 ಬೀದರ:

      ಪಶು ಸಂಗೋಪನೆ, ಹಜ್ ಮತ್ತು ವಕ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಶನಿವಾರ ಅಷ್ಟೂರ ಗ್ರಾಮದ ರೈತ ಶಂಕರ ತಂದೆ ಮಲ್ಲಪ್ಪ ಡೋಮಣೆ ಅವರ ಹೊಲಕ್ಕೆ ತೆರಳಿ ಖುದ್ದು ವೀಕ್ಷಣೆ ನಡೆಸಿ, ಬೆಳೆ ಸಮೀಕ್ಷೆ ಯೋಜನೆಯ ಮಾಹಿತಿ ಪಡೆದರು.

      ಬೆಳೆ ಸಮೀಕ್ಷೆ ಆ್ಯಪನ್ನು ಮೊಬೈಲ್ ಲ್ಲಿ ಡೌನಲೋಡ್ ಮಾಡಿಕೊಂಡಿದ್ದ ರೈತ ಶಂಕರ ಅವರು ಸಚಿವರೇ ಎದುರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡಿದರು. ನಂತರ ಸಚಿವರಿಗೆ ಮೊಬೈಲ್ ತೋರಿಸಿ ಬೆಳೆ ಮಾಹಿತಿ ಅಪ್ಲೋಡ್ ಆಗಿರುವ ಬಗ್ಗೆ ತಿಳಿಸಿದರು.

      ಈ ವೇಳೆ ಮಾತನಾಡಿದ ಸಚಿವರು, ಕರಪತ್ರ, ಪೋಸ್ಟರ್ ಮುದ್ರಿಸಿ ರೈತರಿಗೆ ವಿತರಿಸುವ ಮೂಲಕ 2020-21ನೇ ಸಾಲಿನ ಬೆಳೆ ಸಮೀಕ್ಷೆ ವಿನೂತನ ಯೋಜನೆಯ ಬಗ್ಗೆ ಜಿಲ್ಲೆಯ ರೈತರಿಗೆ ವ್ಯಾಪಕವಾದ ಮಾಹಿತಿ ನೀಡಬೇಕು. ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಮೇತ ಅಪ್ಲೋಡ್‌ ಮಾಡುವುದರ ಬಗ್ಗೆ ರೈತರಿಗೆ ತಿಳಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

      ತನ್ನ ಹೊಲದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಿದ್ದ ರೈತನೊಂದಿಗೆ ಇದೆ ವೇಳೆ ಸಂಸದ ಭಗವಂತ ಖೂಬಾ ಹಾಗೂ ವಿಧಾನ ಪರಿಷತ್ ಸದಸ್ಯರಾದ ರಘುನಾಥ್ ಮಲ್ಕಾಪೂರೆ ಮಾತನಾಡಿ ಮಳೆ ಮತ್ತು ಬೆಳೆಯ ಬಗ್ಗೆ ವಿಚಾರಿಸಿದರು.

      ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಸ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ತಾರಾಮನಿ ಜಿ.ಎಚ್, ಉಪ ನಿರ್ದೇಶಕ ಸೋಮಶೇಖರ ಬಿರಾದಾರ, ಸಹಾಯಕ ನಿರ್ದೇಶಕ ಎಂ.ಎ.ಅನ್ಸಾರಿ ಹಾಗೂ ಅಷ್ಟೂರ ಗ್ರಾಮದ ರೈತರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link