ಡಿ ಜಿ ಹಳ್ಳಿ ಗಲಭೇ ಪೂರ್ವ ನಿಯೋಜಿತ : ಬಿ ಸಿ ಪಾಟೀಲ್

ಹಾವೇರಿ :

     ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಸಹಿಸದ ದುಷ್ಕರ್ಮಿಗಳು ಕರ್ನಾಟಕದ ಡಿ.ಜೆ.ಹಳ್ಳಿ,‌ಕೆ.ಜಿ.ಹಳ್ಳಿಯ ದುಷ್ಕೃತ್ಯ ನಡೆಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿಗಳೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

     ಹಿರೇಕೆರೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು,ಪ್ರಧಾನಿ ಮೋದಿ ಹಾಗೂ ಕರ್ನಾಟಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲೆಂದು ಪೂರ್ವನಿಯೋಜಿತವಾಗಿಯೇ ಈ ದುಷ್ಕೃತ್ಯವೆಸಗಲಾಗಿದೆ.ಗಲಭೆಯಲ್ಲಿ ಬಂಧಿಸಿದವರನ್ನು ಕಾಂಗ್ರೆಸ್‌ನವರು ಅಮಾಯಕರು ಎನ್ನುತ್ತಿದ್ದಾರೆಯೋ ಅವರು ನಿಜವಾಗಿಯೂ ಅಮಾಯಕರಲ್ಲ.ರಾಜಕೀಯ ಪಿತೂರಿ ಕಾರಣಕ್ಕಾಗಿಯೇ ದುಷ್ಕರ್ಮಿಗಳು ಕಾಂಗ್ರೆಸ್ ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ ಎಂದಿದ್ದಾರೆ.

      ದಲಿತ ಶಾಸಕರ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರೂ ಕೂಡ ಕಾಂಗ್ರೆಸ್‌ ನಾಯಕರು ಅವರದ್ದೇ ಪಕ್ಷದ ಶಾಸಕರನ್ನು ಸಮರ್ಥಿಸಿಕೊಳ್ಳಲು ಆಗುತ್ತಿಲ್ಲ.ದಲಿತ ಶಾಸಕನಿಗೆ ಕಾಂಗ್ರೆಸ್ ಪಕ್ಷದಲ್ಲಿಯೇ ರಕ್ಷಣೆಯಿಲ್ಲ.ಕಲ್ಲು ಹೊಡೆಯುವವರನ್ನು ಕಾಂಗ್ರೆಸ್‌ನವರು ಅಮಾಯಕರು ಎನ್ನುತ್ತಿದ್ದಾರೆ. ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಪೊಲೀಸರಿಗೆ ಕಲ್ಲುಹೊಡೆದವರ ನಿವಾಸಕ್ಕೆ ಭೇಟಿ ನೀಡುತ್ತಾರೆ.ಆದರೆ ಕಲ್ಲೇಟಿನಿಂದ ಗಾಯಗೊಂಡಿರುವ ಪೊಲೀಸರನ್ನು ಮಾಜಿ ಗೃಹಮಂತ್ರಿಗಳಾಗಿರುವ ಕೆ.ಜೆ.ಜಾರ್ಜ್ ಅವರು ಏಕೆ ಭೇಟಿ ನೀಡಲಿಲ್ಲ ಎಂದು ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link