ಪಾವಗಡ
ತಾಲ್ಲೂಕಿನ ವಿಶ್ವ ಪ್ರಸಿದ್ದ ಸೋಲಾರ್ ಪಾರ್ಕ್‍ನಲ್ಲಿ ಸ್ಥಳೀಯರಿಗೆ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಮತ್ತಿತರ ಉದ್ಯೋಗಗಳನ್ನು ನೀಡಬೇಕೆಂದು ಆಗ್ರಹಿಸಿ ಬುಧವಾರ ತಿರುಮಣಿಯ ಕೆ.ಪಿ.ಟಿ.ಸಿ.ಎಲ್.ಪಿ. ಒನ್ ಕಛೇರಿಗೆ ಮುತ್ತಿಗೆ ಹಾಕಿ ಆಗ್ರಹಿಸಿದ ಘಟನೆ ಜರುಗಿದೆ.
ಈ ವೇಳೆ ಕಾರ್ಮಿಕ ಮುಖಂಡ ಕ್ಯಾತಗಾನಚರ್ಲು ಶ್ರೀನಿವಾಸ್ ಮಾತನಾಡಿ, ಸೋಲಾರ್ ಪಾಕ್ ನಿರ್ಮಾಣವಾಗಬೇಕಾದರೆ ರಾಜಕಾರಣಿಗಳು, ಅಧಿಕಾರಿಗಳು ಜಮೀನಿಗಾಗಿ ರೈತರಿಗೆ ಭರಪೂರ ಅಶ್ವಾಸನೆಗಳನ್ನು ಕೊಟ್ಟಿದ್ದರು. ಆದರೆ ಈಗ ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಿಲ್ಲ. ಭೂಮಿ ಕೊಟ್ಟ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಬಾಧಿತ ರೈತ ಮಲ್ಲಿಕಾರ್ಜುನ್ ಮಾತನಾಡಿ, ಸೋಲಾರ್ ಪಾರ್ಕ್ ರೈತರಿಗೆ ವರದಾನವಾದರೂ, ಭೂಮಿ ಕೊಟ್ಟ ರೈತನಿಗೆ ಪಾರ್ಕ್‍ನಲ್ಲಿ ಕೆಲಸ ಕೊಡುವುದಾಗಿ ಹೇಳಿದ್ದರು. ಆದರೆ ಈಗ ಕೆಲಸ ಕೇಳಲು ಹೋದರೆ ಪಾರ್ಕ್‍ನ ಸಿಬ್ಬಂದಿ ನಮ್ಮ ಮೇಲೆ ರೌಡಿಗಳಂತೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಮತ್ತೊಬ್ಬ ಬಾಧಿತ ರೈತ ವೆಂಕಟೇಶ್ ಮಾತನಾಡಿ, ಸೋಲಾರ್ ಪಾರ್ಕ್‍ನಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳದೆ ರೋಬೋಗಳನ್ನು ಅಳವಡಿಸಿರುವುದರಿಂದ ಕೂಲಿ ಕಾರ್ಮಿಕರ ಗತಿ ಏನು ಎಂದು ಪ್ರಶ್ನಿಸಿ, ಆದ್ದರಿಂದ ಕೂಡಲೆ ಇಲಾಖಾಧಿಕಾರಿಗಳು ಸೋಲಾರ್ ಪಾರ್ಕ್‍ನಲ್ಲಿ ಮಾಡಲ್ ಕ್ಲೀನಿಂಗ್, ಗ್ರ್ಯಾಸ್ ಕಟಿಂಗ್, ಸೆಕ್ಯೂರಿಟಿ ಗಾರ್ಡ್ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು. ಇಲ್ಲಾವಾದ ಪಕ್ಷದಲ್ಲಿ ಕಚೆರಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಸೋಲಾರ್ ಪಾರ್ಕ್ ಮಹೇಶ, ತಿರುಮಲೇಶ್, ಅಂಜನೇಯಲು, ಕೊಲ್ಲನ್ನ, ನಾಗಭೂಷಣ ಹಾಜರಿದ್ದರು.
ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಕಚೇರಿ ಸಿಬ್ಬಂದಿ ಮಹೇಶ್‍ಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಮಹೇಶ್ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ನ್ಯಾಯ ಒದಗಿಸಿ ಕೊಡುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ