ನಿಮ್ಮ ‘ಕೊರೋನಾ ರಿಪೋರ್ಟ್’ ಈಗ ಆನ್ ಲೈನ್’ನಲ್ಲೇ ಲಭ್ಯ!!

ಬೆಂಗಳೂರು :

     ಇನ್ಮುಂದೆ ಪ್ರತಿಯೊಬ್ಬರು ತಮ್ಮ ಕೊರೊನಾ ಪರೀಕ್ಷಾ ವರದಿಯನ್ನು ಆನ್‌ಲೈನ್ ಮೂಲಕವೇ ತಿಳಿದುಕೊಳ್ಳಬಹುದಾಗಿದೆ.

     ರಾಜ್ಯದಲ್ಲಿ ಕೊರೋನಾ ಸೋಂಕಿನ ಪರೀಕ್ಷೆಯ ನಂತ್ರ ವರದಿಗಾಗಿ ಎರಡು ಮೂರು ದಿನಗಳ ಕಾಲ, ಈ ಮೊದಲು ಒಂದು ವಾರಗಟ್ಟಲೆ ಕಾಯಬೇಕಾಗಿತ್ತು. ಜೊತೆಗೆ ವರದಿ ಪಾಸಿಟಿವ್ ಆಗಿದ್ದರೇ ಮಾತ್ರ ಪರೀಕ್ಷೆಗೆ ಒಳಗಾದವರಿಗೆ ಮಾತ್ರವೇ ತಿಳಿಸುತ್ತಾರೆ. ನೆಗೆಟಿವ್ ಬಂದ್ರೆ ಹೇಳೋದೇ ಇಲ್ಲ ಎಂಬುದಾಗಿ ಆರೋಪಿಸಲಾಗುತ್ತಿತ್ತು. ಆದ್ರೇ ಇದೀಗ ಇದಕ್ಕೆಲ್ಲ ಇತಿಶ್ರೀ ಹಾಡಿರುವ ಆರೋಗ್ಯ ಇಲಾಖೆ, ಕೊರೋನಾ ಪರೀಕ್ಷೆಗೆ ಒಳಗಾದಂತವರ ವರದಿ ಆನ್ ಲೈನ್ ನಲ್ಲಿಯೇ ಲಭ್ಯವಾಗುವಂತೆ ಮಾಡಿದೆ.

      https://www.covidwar.karnataka.gov.in/service1 ಜಾಲತಾಣಕ್ಕೆ ಭೇಟಿ ನೀಡಬೇಕು. ಈ ಜಾಲತಾಣದಲ್ಲಿ ನೀವು ಕೊರೋನಾ ಪರೀಕ್ಷೆಗೆ ಒಳಪಟ್ಟಂತ ಸಂದರ್ಭದಲ್ಲಿ ನಿಮಗೆ ಎಸ್ ಆರ್ ಎಫ್ ಐಡಿ ನಂಬರ್ ನೀಡಿರುತ್ತಾರೆ. ಆ ಸಂಖ್ಯೆಯನ್ನು ಉಲ್ಲೇಖಿಸಿ. ಆನಂತ್ರ ಅದರ ಕೆಳಗಿನ ಗುಪ್ತ ಸೂಚಕ ಕೋಡ್ ನಮೂದಿಸಿ ಸರ್ಚ್ ಬಟನ್ ಒತ್ತಿ. ಆಗ ನಿಮ್ಮ ಕೊರೋನಾ ಪರೀಕ್ಷೆಯ ವರದಿ ಪಾಸಿಟಿವ್ ಅಥವಾ ನೆಗೆಟಿವ್ ಎಂಬುದಾಗಿ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link