ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಲಷ್ಕರ್ – ಎ – ತೋಯ್ಬಾ (ಎಲ್ಇಟಿ) ಕಮಾಂಡರ್ ಜೊತೆಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಕಾಶ್ಮೀರದಲ್ಲಿ ಹೆಚ್ಚಾಗುತ್ತಿರುವ ಉಗ್ರಗಾಮಿಗಳ ಉಪಟಳ ನಿಗ್ರಹಕ್ಕಾಗಿ ನಡೆದ ನಾಲ್ಕು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕುಖ್ಯಾತ ಭಯೋತ್ಪಾದಕ ಸೇರಿದಂತೆ ಮೂವರು ಆತಂಕವಾದಿಗಳನ್ನು ಯೋಧರು ಹೊಡೆದುರುಳಿಸಿದ್ದಾರೆ.
ಎನ್ಕೌಂಟರ್ನಲ್ಲಿ ಹತ್ಯೆಯಾದ ಒಬ್ಬ ಉಗ್ರನನ್ನು ಪಾಕಿಸ್ತಾನ ಮೂಲದ ಉಗ್ರ ಡ್ಯಾನಿಶ್ ಎಂದು ಗುರುತಿಸಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಹತ್ಯೆಗೀಡಾದ ಇನ್ನೊಬ್ಬ ಉಗ್ರ ಎಲ್ಇಟಿ ಕಮಾಂಡರ್ ನಸೀರ್ – ಉ – ದಿನ್ ಲೋನ್ ಆಗಿದ್ದು, ಆತ ಏಪ್ರಿಲ್ 18ರಂದು ಸೊಪೋರ್ನಲ್ಲಿ ಮೂವರು ಸಿಆರ್ಪಿಎಫ್ ಜವಾನರನ್ನು ಮತ್ತು ಮೇ 4ರಂದು ಹ್ಯಾಂಡ್ವಾರಾದಲ್ಲಿ ಮೂವರು ಸಿಆರ್ಪಿಎಫ್ ಜವಾನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ.
ನಾಲ್ವರು ಉಗ್ರಗಾಮಿಗಳನ್ನು ಬಂಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ