ಕೊರೊನಾ ಇದ್ದರೂ ಸಂಭ್ರಮದ ಗೌರಿ ಪೂಜೆ

ಹುಳಿಯಾರು    ಕೊರೊನಾ ಭೀತಿ ಮಧ್ಯೆಯೂ ಹುಳಿಯಾರು ಪಟ್ಟಣದಲ್ಲಿ ಗೌರಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಪಟ್ಟಣದ ಹಲವು ದೇವಸ್ಥಾನಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಲಾಗಿತ್ತು. ಮಕ್ಕಳು, ಮಹಿಳೆಯರು, ಹಿರಿಯರು ತಮ್ಮ ಕುಟುಂಬದ ಸದಸ್ಯರೊಡನೆ ದೇವಸ್ಥಾನಗಳಿಗೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ಪ್ರತಿವರ್ಷಕ್ಕೆ ಹೋಲಿಸಿದರೆ ಈ ಬಾರಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು.

     ಬಂಗಾರದ ಬಣ್ಣದಂತೆ ಹೊಳೆಯುವ ಗೌರಿಯನ್ನು ಕೆಲವರು ಮನೆಯಲ್ಲೇ ಪ್ರತಿಷ್ಠಾಪನೆ ಮಾಡಿ ಪೂಜಿಸಿದರು. ಮನೆಯಲ್ಲೇ ಮಂಟಪ ನಿರ್ಮಿಸಿ, ಮಾವಿನ ತೋರಣ, ಬಾಳೆಕಂದು ಕಟ್ಟಿ ಅಲಂಕಾರ ಮಾಡಿ ಗೌರಿ ಮೂರ್ತಿಯನ್ನು ಶೃಂಗರಿಸಿ ಸಡಗರದಿಂದ ಗೌರಿ ಹಬ್ಬ ಆಚರಿಸಿದರು.

    ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹೊಸ ಬಟ್ಟೆಗಳನ್ನು ತೊಟ್ಟು ಗೌರಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತಿ-ಭಾವದಿಂದ ಗೌರಿಗೆ ನಮಿಸಿ ಆರತಿ ಬೆಳಗಿದರು. ಮನೆಮನೆಗಳಲಿ ಸಿಹಿ ಅಡುಗೆ ಮಾಡಿ, ಮನೆಗೆ ಬಂದ ಮುತ್ತೈದೆಯರಿಗೆ ಉಡುಗೊರೆ, ಅರಿಶಿನ-ಕುಂಕುಮ ನೀಡಿ ಆಶೀರ್ವಾದ ಪಡೆದು ಧನ್ಯತಾ ಭಾವ ಮೆರೆದರು. ಬಹುತೇಕ ಮನೆಗಳಲ್ಲಿ ಗೌರಿ ಬಾಗಿನ ನೀಡುವ ಕಾರ್ಯಗಳೂ ಸಹ ನಡೆದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link