ತುಮಕೂರು
ನಗರ ಪಾಲಿಕೆಯ ಕಂದಾಯ ಇಲಾಖೆ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಕಂದಾಯ ಶಾಖೆ ಕಚೇರಿಯನ್ನು ಸೀಲ್ಡೌನ್ ಮಾಡಲಾಯಿತು.ಕಂದಾಯ ಅಧಿಕಾರಿಗೆ ಸೋಂಕು ಖಚಿತವಾದ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾರಿಗಳು ಪಾಲಿಕೆ ಕಚೇರಿಗೆ ಆಗಮಿಸಿ, ಸೋಂಕಿತ ಅಧಿಕಾರಿಯ ಸಂಪರ್ಕಿತರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಿದರು. ಪಾಲಿಕೆ ಸಿಬ್ಬಂದಿ ಕಂದಾಯ ವಿಭಾಗ ಕಚೇರಿಯನ್ನು ಸ್ಯಾನಿಟೈಸ್ ಮಾಡಿ ನಂತರ ಸೀಲ್ಡೌನ್ ಮಾಡಲಾಯಿತು.ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ್ದ ಕಂದಾಯ ಇಲಾಖೆ ಅಧಿಕಾರಿಗೆ ಸೋಂಕು ತಗುಲಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಧಿಕಾರಿಯ ಸಂಪರ್ಕದಲ್ಲಿದ್ದ ಇನ್ನಿತರರ ಪತ್ತೆ ಕಾರ್ಯ ನಡೆದಿದೆ.
ಮಂಗಳವಾರ ನಗರ ಪಾಲಿಕೆ ಸಾಮಾನ್ಯ ಸಭೆ ನಿಗಧಿಯಾಗಿದ್ದು, ಕಚೇರಿಯ ಅಧಿಕಾರಿಗೆ ಪಾಸಿಟೀವ್ ಬಂದಿರುವುದು ಆತಂಕ ಉಂಟು ಮಾಡಿದೆ. ಸಾಮಾನ್ಯ ಸಭೆ ನಡೆಸಬೇಕೆ ಅಥವಾ ಮುಂದೂಡಬೇಕೆ ಎಂಬ ಬಗ್ಗೆ ಸದಸ್ಯರು, ಅಧಿಕಾರಿಗಳ ಜೊತೆ ಮೇಯರ್ ಫರೀದಾ ಬೇಗಂ ಚರ್ಚೆ ನಡೆಸಿದರು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಕೊಂಡು ಸಭೆ ನಡೆಸಲು ತೀಮಾನಿಸಲಾಗಿದೆ. ಬೆಳಿಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ ಎಂದು ಮೇಯರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
