ತಿಪಟೂರು :
ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ಪ್ರಚಾರ ಮಾಡಿದ ಪರಿಣಾಮವಾಗಿ ವಿಚಾರಣೆ ಮಾಡಬೇಕೆಂದು ಕರೆಸಿ ಡಿ.ವೈ.ಎಸ್ಪಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿರುವ ವ್ಯಕ್ತಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ತಾಲ್ಲೂಕಿನ ನೊಣವಿನಕೆರೆ ಹೋಬಳಿ, ಆಲದಹಳ್ಳಿ ಗ್ರಾಮದ ವಾಸಿ ಹರೀಶ್ ಎಂಬುವರ ಮೇಲೆ ಡಿ.ವೈ.ಎಸ್ಪಿ ಕಚೇರಿಯಲ್ಲಿ ಡಿ.ವೈ.ಎಸ್ಪಿ ಚಂದನ್ ಕುಮಾರ್ ಲಾಠಿಯಿಂದ ಹಲ್ಲೆ ಮಾಡಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ಡಿ.ವೈ.ಎಸ್ಪಿ ಕಚೇರಿಯಿಂದ ಫೋನ್ ಕರೆ ಬಂದಿದ್ದರಿಂದ ಹರೀಶ್ ಕಚೇರಿಗೆ ತೆರಳಿದಾಗ ಡಿ.ವೈ.ಎಸ್ಪಿ ಚಂದನ್ ಕುಮಾರ್ ತಾಲೂಕಿನ ಜನಪ್ರತಿನಿಧಿಗಳ ವಿರುದ್ಧ ಮಾತನಾಡುತ್ತಿಯ ಎಂದು ಕೆಟ್ಟ ಭಾಷೆಯಲ್ಲಿ ಬೈದು ನಂತರ ಅಲ್ಲೇ ಇದ್ದ ಲಾಠಿಯಿಂದ ಕೈಗಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಲ್ಲದೇ.
ನಮಗೆ ಜನ ಪ್ರತಿನಿಧಿಗಳು ಸಂಬಂಳ ನೀಡುತ್ತಾರೆ ನೀನು ಅವರ ಬಗ್ಗೆ ಮಾತನಾಡಿದರೆ ಗೂಂಡಾ ಕಾಯ್ದೆ ಹಾಕಬೇಕಾಗುತ್ತದೆ ಎಂದಿದ್ದಾರೆಂದು ತನ್ನ ಹೇಳಿಕೆಯಲ್ಲಿ ಹಲ್ಲೆಗೊಳಗಾದ ಯುವಕ ತಿಳಿಸಿದ್ದಾನೆ.ಈ ಘಟನೆಯ ನಂತರ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೆ ಇದೇ ರೀತಿ ಪೋಲಿಸರಿಂದ ನನ್ನ ಮೇಲೆ ದೌರ್ಜನ್ಯವಾದರೆ ನನ್ನ ಸಾವಿಗೆ ಪೋಲೀಸ್ ಇಲಾಖೆಯೆ ಕಾರಣವೆಂದು ತನ್ನ ಹೇಳಿಕೆ ನೀಡಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ