ಬೆಂಗಳೂರು:

ಜನಿಸಿದ 4 ಗಂಟೆಯಲ್ಲೇ ಕೊರೊನಾ ಸೋಂಕಿನಿಂದ ನವಜಾತ ಶಿಶು ಸಾವನ್ನಪ್ಪಿದ ಕರುಣಾಜನಕ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಪರಿಣಾಮ ಹುಟ್ಟಿದ ಮೂರ್ನಾಲ್ಕು ಗಂಟೆಗಳಲ್ಲೇ ಮಗು ಸಾವನ್ನಪ್ಪಿದೆ.
ಕೊರೊನಾದಿಂದ ಮೃತಪಟ್ಟ ಮಗುವಿಗೆ ಅಂತ್ಯ ಸಂಸ್ಕಾರವನ್ನು ಅಂಬುಲೆನ್ಸ್ ಸಿಬ್ಬಂದಿಯೇ ನೆರವೇರಿಸಿದ್ದಾರೆ. ಮಗುವಿನ ತಾಯಿಗೆ ಕೊರೊನಾ ಪಾಸಿಟಿವ್ ಇದೆ. ಮಗುವಿನ ತಂದೆ ಅಥವಾ ಕುಟುಂಬದವರು ಯಾರೂ ಮಗುವನ್ನು ನೋಡಲು ಬಂದಿಲ್ಲ. ಹೀಗಾಗಿ ಆಸ್ಪತ್ರೆಯ ಅಂಬುಲೆನ್ಸ್ ಸಿಬ್ಬಂದಿಯೇ ಮಗುವಿನ ಅಂತ್ಯಸಂಸ್ಕಾರ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








