ಕುಂಚಿಗನಾಳು ಬಳಿ ಡಿಸಿ ಕಚೇರಿ ನಿರ್ಮಾಣ;ತಿಪ್ಪಾರೆಡ್ಡಿ

ಚಿತ್ರದುರ್ಗ

    ಮುಂದಿನ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಸೇರಿದಂತೆ ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಶಾಸಕ ಜಿ.ಹೆಚ್,ತಿಪ್ಪಾರೆಡ್ಡಿ ತಿಳಿಸಿದರು.

    ಚಿತ್ರದುರ್ಗ ನಗರದ ಕುಂಚಿಗನಾಳು ಗ್ರಾಮದ ಬಳಿ ಸುಮಾರು 25 ಕೋಟಿ ರೂ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡ ನಿರ್ಮಾಣ ಮೀಸಲಿರಿಸಿರುವ ಜಮೀನಿನ ಸ್ಥಳ ಪರಿಶೀಲನೆ ಮಾಡಿ ನಂತರ ಇದಕ್ಕೆ ಸಂಬಂಧಪಟ್ಟಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

    ಚಿತ್ರದುರ್ಗ ನಗರದಲ್ಲಿ ವಿವಿಧ ಸುಮಾರು 15 ಹಾಸ್ಟಲ್‍ಗಳ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ, ಇದ್ದಲ್ಲದೆ ನಗರದಲ್ಲಿ ವಿವಿಧಶ ರಸ್ತೆಗಳ ಕಾಮಗಾರಿಯೂ ಸಹಾ ಪ್ರಾರಂಭವಾಗಿದೆ ಇನ್ನೂ ಕೆಲವು ಪ್ರಾರಂಭವಾಗಬೇಕಿದೆ ಅದರ ಚಾಲನೆಯನ್ನು ಸಹಾ ಮುಖ್ಯಮಂತ್ರಿ ಯಡೆಯೂರಪ್ಪರವರು ಮುಂದಿನ ತಿಂಗಳು ಚಾಲನೆ ನೀಡಲಿದ್ದಾರೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಚಿತ್ರದುರ್ಗ ನಗರದಲ್ಲಿ ಎಲ್ಲಿಯೂ ಸಹಾ ಜಾಗ ಸಿಗದ ಹಿನ್ನಲೆಯಲ್ಲಿ ರಾ.ಹೆ.4ಕ್ಕೆ ಹೊಂದಿಕೊಂಡಂತೆ ಇರುವ ಕುಂಚಿಗನಾಳ್ ಬಳಿಯಲ್ಲಿ ಸರ್ಕಾರದ 40 ಎಕರೆ ಜಾಗವನ್ನು ಗುರುತಿಸಲಾಗಿದೆ. ಅಲ್ಲಿಯ ವಾತಾವರಣವೂ ಸಹಾ ಉತ್ತಮವಾಗಿದೆ ಅಲ್ಲದೆ ನಗರವೂ ಸಹಾ ಬೆಳೆಯುತ್ತಿರುವುದರಿಂದ ಅಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ, ಈ ಹಿನ್ನಲೆಯಲ್ಲಿ ಇಂದು ಜಾಗವನ್ನು ಪರಿಶೀಲನೆ ಮಾಡಲಾಯಿತೆಂದು ಹೇಳೀದರು.

     ಈ ಜಾಗ ಎತ್ತರವಾಗಿದ್ದು ಇಲ್ಲಿ ಸುಂದರವಾದ ಉತ್ತಮವಾದ ಜಿಲ್ಲಾಧಿಕಾರಿಗಳ ಕಚೇರಿಯನ್ನು ನಿರ್ಮಾಣ ಮಾಡುವ ಬಗ್ಗೆ ವಿವಿಧ ಇಲಾಖೆಯವರಿಂದ ಒಪ್ಪಿಗೆ ಪತ್ರವನ್ನು ಪಡೆಯುವುದರ ಮೂಲಕ ಮುಖ್ಯಮಂತ್ರಿಗಳಿಂದ ಕಾಮಗಾರಿಗೆ ಚಾಲನೆ ಕೂಡಿಸಲು ತೀರ್ಮಾನಿಸಲಾಗಿದೆ, ಇದ್ದಲ್ಲದೆ ಬಿಸಿಎಂ ಇಲಾಖೆಯಿಂದ 50 ಕೋಟಿ ರೂ.ಗಳನ್ನು ವೆಚ್ಚ ಮಾಡುವುದರ ಮೂಲಕ 15 ಹಾಸ್ಟಲ್‍ಗಳನ್ನು ನಿರ್ಮಾಣ ಮಾಡಲಾಗಿದೆ ಇದರೊಂದಿಗೆ ಪ್ರವಾಸಿ ಮಂದಿರ ನಿರ್ಮಾಣಕ್ಕೆ 10 ಕೋಟಿ ರೂ. ಸೇರಿದಂತೆ 300 ರಿಂದ 400 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

   ಕೊರೋನ ವೈರಸ್ ಹಿನ್ನಲೆಯಲ್ಲಿ ಕಾರ್ಯಕ್ರಮ ನಡೆಯುವ ಮುನ್ನಾ ದಿನ ಅದರ ತ್ರೀವತೆಯ ಬಗ್ಗೆ ಪರಿಶೀಲನೆ ಮಾಡಿ ನಂತರ ಕಾರ್ಯಕ್ರಮದ ಅಂತಿಮ ತೀರ್ಮಾನ ಮಾಡಲಾಗುವುದು, ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಇಲಾಖೆಯಿಂದ ಯಾವುದೇ ಅಡ್ಡಿ ಇಲ್ಲ ಎಂಬ ಅನುಮತಿಯನ್ನು ಪಡೆಯಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪ ವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್ ವೆಂಕಟೇಶಯ್ಯ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಕಾಶ್ ಮೂರ್ತಿ, ನಗರಸಭೆಯ ಆಯುಕ್ತ ಹನುಮಂತರಾಜು, ಸೇರಿದಂತೆ ಅರಣ್ಯ, ಗಣಿಗಾರಿಕೆ ಸರ್ವೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap