ತಿಪಟೂರು :
ತಾಲ್ಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬರುತ್ತಿರುವ ಪುಬ್ಬಾಮಳೆಯಿಂದ ರೈತರು ಮತ್ತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಶುಕ್ರವಾರ ರಾತ್ರಿ ತಾಲ್ಲೂಕಿನ ಬಹುಬಾಗದಲ್ಲಿ ಉತ್ತಮ ಮಳೆಯಾಗಿದ್ದು ಕೆಲವುಕಡೆ ಚಿಕ್ಕ-ಪುಟ್ಟ ಕೆರೆಗಳು ತುಂಬಿದ್ದು ಹಳ್ಳಕೊಳ್ಳಗಳಲ್ಲಿ ಗಂಗಾಮಾತೆಯಿಂದ ಜೀವಕಳೆ ತುಂಬಿದೆ. ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಮದ್ಲೇಹಳ್ಳಿ ಕೆರೆಯು ತುಂಬಿದ್ದು ಕೋಡಿಬಿದ್ದ ನೀರು ಕುಪ್ಪಾಳು ಕೆರೆಯನ್ನು ಸೇರುತ್ತಿದೆ. ರೈತರು ಹೇಳುವ ಪ್ರಕಾರ ಮಳೆ ಇನ್ನೊಂದರೆರಡು ದಿನ ಹೀಗೆ ಬರುತ್ತದೆ ಎಂಬ ನಂಬಿಕೆ ಇದೆ ಪುಬ್ಬಾಮಳೆಯು ಎಂದು ರೈತರ್ನು ಕೈಬಿಟ್ಟಿಲ್ಲ ಮಳೆ ಇನ್ನೂ ಸೆಪ್ಟಂಬರ್ 12ರವರೆಗೂ ಇದ್ದು ಇದು ಉತ್ತಮವಾಗಿ ಆದರೆ ಅಂತರ್ಜಲ ಪ್ರಮಾಣವು ಸ್ವಲ್ಪಮಟ್ಟಿಗೆ ಏರುವುದರಿಂದ ಉತ್ತಮ ಬೆಳೆಯನ್ನು ನಿರೀಕ್ಷಿಸುತ್ತಿದ್ದಾರೆ.
ಮತ್ತೆ ಯೂರಿಯಾ ಕೊರತೆ ಎದುರಾಗುತ್ತದೆಯೇ? : ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ ಮಳೆಇಲ್ಲದೇ ರೈತರು ಗೊಬ್ಬರ ಅಂಗಡಿಗಳ ಕಡೆಗೆ ತಲೆಹಾಕಿರಲಿಲ್ಲಆದರೆ ಪುಬ್ಬಾ ಮಳೆ ಆರಂಭವಾದಾಗಿನಿಂದ ಒಬ್ಬ ರೈತರಿಗೆ ಅಥವಾ ಆಧಾರ್ ಕಾರ್ಡ್ಗೆ ಒಂದರಂತೆ ಯೂರಿಯಾವನ್ನು ವಿತರಿಸಿದರು. ಆದರೆ ಈಗ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಯೂರಿಯಾದ ಅವಶ್ಯಕತೆ ತುಂಬಾ ಇದೆ ಇಂತಹ ಸಮಯದಲ್ಲಿ ಮತ್ತೆ ಏನಾದರು ಯೂರಿಯಾ ಕೊರತೆಯಾದರೆ ರೈತರು ಪರಿಸ್ಥಿತಿ ಹದಗೆಡುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ