ರಾಷ್ಟ್ರಧ್ವಜ ಅಪಮಾನ ಪ್ರಕರಣ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ

ಗುಬ್ಬಿ

    ಕಳೆದ 10 ತಿಂಗಳ ಹಿಂದೆ ನಡೆದ ರಾಷ್ಟ್ರಧ್ವಜ ವಿರೂಪಗೊಳಿಸಿ ಅಪಮಾನ ಮಾಡಿದ ಪ್ರಕರಣದಲ್ಲಿ ಶಿಕ್ಷಣ ಇಲಾಖೆ ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯ ತೋರಿದ ಹಿನ್ನಲೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

    ಪಟ್ಟಣದ ಶಾಲಾ ಕೊಠಡಿಯೊಂದರಲ್ಲಿ ವಿರೂಪಗೊಂಡ ರಾಷ್ಟ್ರಧ್ವಜ ಬಿಸಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದ ಅಂದಿನ ಬಿಇಒ ಯಾವುದೇ ಪರಶೀಲನೆ, ತನಿಖೆ ಕ್ರಮವನ್ನು ಅನುಸರಿಸದೇ ಬೇಜವಾಬ್ದಾರಿ ತೋರಿದ್ದ ಹಿನ್ನಲೆ ಕೆಲ ಸಾಮಾಜಿಕ ಹೋರಾಟಗಾರರು ಈ ಬಗ್ಗೆ ಕ್ರಮ ಕೈಗೊಳ್ಳಲು ಸ್ವಾತಂತ್ರ್ಯ ದಿನದಂದು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸ್ ಇಲಾಖೆ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿ ಪೊಲೀಸ್ ಪ್ರಕರಣವನ್ನು ತನಿಖೆ ಮೂಲಕ ಚುರುಕುಗೊಳಿಸಿದ್ದರು.

    ಆದರೆ ಶಿಕ್ಷಣ ಇಲಾಖೆ ಈವರೆವಿಗೆ ಸಂಬಂಧಪಟ್ಟ ಶಾಲಾ ಸಿಬ್ಬಂದಿಗಳಿಗೆ ನೋಟೀಸ್ ನೀಡುವ ಗೋಜಿಗೂ ಹೋಗಿಲ್ಲ. ಮೇಲಾಧಿಕಾರಿಗಳಿಗೂ ಈ ವಿಚಾರ ಮುಟ್ಟಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಿಇಓ ಕಚೇರಿ ಮುಂದೆ ಒಂದು ತಾಸು ಪ್ರತಿಭಟಿಸಿದ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ಈ ಹಿಂದೆ ಅಸಡ್ಡೆ ತೋರಿ ವರ್ಗಾವಣೆಗೊಂಡ ಬಿಇಓ ವೆಂಕಟೇಶಪ್ಪ ಅವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.

    ಸ್ಥಳಕ್ಕೆ ಆಗಮಿಸಿದ ಬಿಇಓ ಸೋಮಶೇಖರ್ ತನಿಖೆಯನ್ನು ಪ್ರಾಥಮಿಕವಾಗಿ ನಡೆಸಬೇಕಿದೆ. ಸಂಬಂಧಪಟ್ಟ ಎಲ್ಲಾ ಸಿಬ್ಬಂದಿಗಳನ್ನೂ ತನಿಖೆ ಮತ್ತು ಸ್ಥಳ ಪರಿಶೀಲನೆ ನಡೆಸುವ ಭರವಸೆ ನೀಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಸಿ.ನಂಜಯ್ಯ ಪ್ರತಿಭಟನಾ ಕಾರರೊಂದಿಗೆ ಮಾತನಾಡಿ ಶಾಲೆಯ ಮಹಜರು ಮಾಡಿಸುವ ಜತೆಗೆ ಪೊಲೀಸ್ ಇಲಾಖೆಯಲ್ಲಿ ನಡೆದ ತನಿಖೆ ಅನುಸಾರದಂತೆ ಶೀಘ್ರದಲ್ಲಿ ಎಲ್ಲಾ ಕ್ರಮವನ್ನು ಇಲಾಖೆ ಕೈಗೊಳ್ಳಲಿದೆ. ನಿರೀಕ್ಷಣಾ ಜಮೀನು ಪಡೆದ ಶಿಕ್ಷಕ ಹಾಗೂ ಸಿಸಿ ಕೆಮರಾ ಪುಟೇಜ್ ಹೊತ್ತೊಯ್ದ ಉಪಪ್ರಾಚಾರ್ಯರನ್ನು ತನಿಖೆಗೆ ಒಳಪಡಿಸಲಾಗುವುದು. ಇನ್ನಿತರ ಸಾಕ್ಷ್ಯಾಧಾರವನ್ನು ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿಯನ್ನು ಹಿಂಪಡೆದರು.

    ಈ ಸಂದರ್ಭದಲ್ಲಿ ಮುಖಂಡರಾದ ನಾಗಸಂದ್ರ ವಿಜಯ್‍ಕುಮಾರ್, ಜಿ.ಆರ್.ರಮೇಶ್, ಜಿ.ಎಸ್.ಮಂಜುನಾಥ್, ಸಿ.ಆರ್. ಶಂಕರ್‍ಕುಮಾರ್, ಬಿ.ಲೋಕೇಶ್, ಜಯ ಕರ್ನಾಟಕ ಸಂಘಟನೆಯ ವಿನಯ್, ಮಧು, ಚಂದನ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link