ನವದೆಹಲಿ :
ರೈಲ್ವೆ ಇಲಾಖೆ ಹಂತ ಹಂತವಾಗಿ ರೈಲು ಸಂಚಾರ ಆರಂಭಿಸಲು ಮುಂದಾಗಿದ್ದು, ಸೆಪ್ಟಂಬರ್ 12 ರಿಂದ 80 ಹೊಸ ರೈಲುಗಳು ಸಂಚಾರ ಆರಂಭಿಸಲಿವೆ.
ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆ ಶುರುವಾಗಿದ್ದು, ಇವುಗಳ ಜೊತೆಗೆ ಚಾಲನೆಯಲ್ಲಿರುವ 230 ವಿಶೇಷ ರೈಲುಗಳು ಜೊತೆಗಿರಲಿವೆ. ಇವು ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳಾಗಿದ್ದು, ಈ ಹೊಸ 80 ರೈಲುಗಳು ಈಗಾಗಲೇ ಚಾಲನೆಯಲ್ಲಿರುವ 230 ವಿಶೇಷ ರೈಲುಗಳ ಜೊತೆಗೆ ಇರಲಿವೆ ಎಂದು ಇತ್ತೀಚೆಗೆ ಭಾರತೀಯ ರೈಲ್ವೆಯ ಮೊದಲ ಸಿಇಒ ಆಗಿ ನೇಮಕಗೊಂಡಿರುವ ಯಾದವ್ ತಿಳಿಸಿದ್ದಾರೆ.
Indian Railways to run additional 40 pairs of more special trains w.e.f. 12th September 2020.
These will be fully reserved train. Ticket can be booked from 10th September, 2020https://t.co/nurgBZYvJd pic.twitter.com/TtQKJyKAdQ
— Ministry of Railways (@RailMinIndia) September 6, 2020
ಈ ರೈಲುಗಳ ಸಮಯವು ಸಾಮಾನ್ಯ ರೈಲುಗಳಂತೆಯೇ ಇರಲಿದ್ದು, ಈ ಹೊಸ ರೈಲುಗಳಲ್ಲಿ ದೆಹಲಿ-ಇಂದೋರ್, ಯಶ್ವಂತ್ಪುರ್-ಗೋರಖ್ಪುರ್, ಪುರಿ-ಅಹಮದಾಬಾದ್, ನವದೆಹಲಿ-ಬೆಂಗಳೂರು ಮಾರ್ಗಗಳು ಸೇರಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ