ಮಧುಗಿರಿ:
ಸೂಕ್ತ ನಿರ್ವಹಣೆ ಇಲ್ಲದೆ ಅಂಬೇಡ್ಕರ್ ಭವನವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿದೆ ಎಂದು ತಾಲ್ಲೂಕು ದಲಿತ ಪರ ಒಕ್ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣಾದ ಸಮೀಪವಿರುವ ಅಂಬೇಡ್ಕರ್ ಭವನವು ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿದ್ದು ಇಲಾಖೆ ಕುಂಭಕರ್ಣನ ನಿದ್ದೆಗೆ ಜಾರಿದಂತೆ ಕಂಡು ಬರುತ್ತಿದೆ. ಭವನವು ಸರಿಯಾದ ನಿರ್ವಹಣೆ ಮತ್ತು ಸಾರ್ವಜನಿಕರಿಗೆ ಅನುಕೂಲವಿಲ್ಲದೆ ವ್ಯರ್ಥವಾಗಿ ಸೊರಗುತ್ತಿದೆ. ಭವನದಲ್ಲಿ ದೊಡ್ಡ ವಿಶಾಲವಾದ ಹಾಲ್ ಇದ್ದರು ಯಾವುದೇ ಪ್ರಯೋಜನ ಕಾಣುತ್ತಿಲ್ಲಾ. ಭವನದಲ್ಲಿ ಮೇಲಿನ ಹಂತಸ್ತಿನಲ್ಲಿರುವ ಸಭಾ ಭವನದಲ್ಲಿ ಕಾರ್ಯಕ್ರಮಗಳ ಆಯೋಜನೆಗೆ ಮಾಡಲು ಸರಿಯಾದ ಪಿಠೋಪಕರಣಗಳು ಇಲ್ಲವಾಗಿವೆ. ಫ್ಯಾನು, ಲೈಟ್ ಸ್ವಿಚುಗಳು ಹಾಳಾಗಿದೆ ಇಲ್ಲಿ ವಿದ್ಯುತ್ ಸಂಪರ್ಕವಿದ್ದೂ ಇಲ್ಲದಂತಾಗಿದೆ.
ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು , ಶೌಚಾಲಯದಲ್ಲಿ ಸ್ವಚ್ಚತೆ ಮರಿಚಿಕೆಯಾಗಿದೆ. ಅಂಬೇಡ್ಕರ್ ಭವನದ ಮೇಲಂತಸ್ತು ನೆಪ ಮಾತ್ರ ಇದ್ದು ಇದರ ಉಪಯೋಗ ಭವನಕ್ಕಿಲ್ಲದೇ ಮತ್ಯಾರಿಗೂ ಲಾಭ ತರಿಸುತ್ತಿದೆ. ಭವನ ತನ್ನ ಅಂದವನ್ನು ಕಳೆದು ಕೊಳ್ಳುತ್ತಿರುವುದರ ಜೊತೆಗೆ ಇರುವ ಕಿಟಕಿಗಳು ಸಹ ಹಾಳಾಗಿವೆ ಮಳೆ ಬಂದರೆ ನೀರು ನಿಂತು ಒಳಗಡೆ ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿದೆ.
ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳು ಭವನದ ಪಕ್ಕದಲ್ಲಿಯೇ ಓಡಾಡುತ್ತಿದ್ದು ಕಣ್ಣಿದ್ದು ಕುರುಡರಾಗಿದ್ದಾರೆ. ಇನ್ನೂ ಸಮಾಜ ಕಲ್ಯಾಣ ಇಲಾಖೆಯಂತು ಭವನವನ್ನು ಮರೆತು ಮಲಗಿಬಿಟ್ಟಂತೆ ಕಾಣುತ್ತಿದೆ. ರಾಷ್ರ್ಟದ ಧೀಮಂತ ಮಹಾತ್ಮರ ಹೆಸರುಗಳಲ್ಲಿ ನಿರ್ಮಾಣ ಮಾಡುವ ಸಮುಧಾಯ ಭವನಗಳನ್ನು ಸುವ್ಯವಸ್ಥಿತವಾಗಿ ಅಧಿಕಾರಿಗಳು ನಿರ್ವಹಣೆ ಮಾಡುತ್ತಿಲ್ಲಾ ಆದಷ್ಟೂ ಬೇಗಾ ಭವನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ದಲಿತ ಪರ ಒಕ್ಕೂಟದ ಡಿ.ಟಿ.ಸಂಜೀವ್ ಮೂರ್ತಿ, ಮುಖಂಡರಾದ ಮಹರಾಜು, ಎಂಆರ್ಪಿಎಸ್ ರಾಜ್ಯ ಉಪಾಧ್ಯಕ್ಷ ತೊಂಡೋಟಿ ರಾಮಾಂಜಿ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ