ತಿಪಟೂರು :
ಮಹಾಲಯ ಅವಾಮಾಸ್ಯೆ ಹಬ್ಬದ ಪ್ರಯುಕ್ತ ರಸ್ತೆಗಿಳಿದ ನಾಗರೀಕರಿಗೆ ಆರಕ್ಷಕರು ಬಿಸಿ ಮುಟ್ಟಿಸಿದರು ಇದಕ್ಕೆ ಸಾರ್ವಜನಿಕರ ಆಕ್ರೋಷ ವ್ಯಕ್ತವಾಗಿದೆ.ದಿನ ನಿತ್ಯದಂತೆ ದ್ವಿ ಚಕ್ರವಾಹನದಲ್ಲಿ ಸಂಚರಿಸುವ ಎಲ್ಲರೂ ಸಾಮಾನ್ಯವಾಗಿ ಚಾಲನಾ ಪರವಾನಗಿ, ವಾಹನದ ಆರ್.ಸಿ. ಬುಕ್ ಹಾಗೂ ವಾಹನದ ವಿಮೆಯನ್ನು ಪಾಲಿಸುವುದರ ಜೊತೆಗೆ ತಮ್ಮ ಜೊತೆ ಇಟ್ಟುಕೊಂಡೇ ಸಾಗುತ್ತಾರೆ.
ಇಂದು ರಾಷ್ಟ್ರೀಯ ಹೆದ್ದಾರಿಯ ಹುಚ್ಚಗೊಂಡನಹಳ್ಳಿಯ ಬಳಿ ತಿಪಟೂರು ಗ್ರಾಮಾಂತರ ಪೋಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದು ಈ ವೇಳೆ ಎಲ್ಲಾ ದಾಖಲೆಗಳನ್ನು ಹೊಂದಿದ್ದರು ಸಹ ಶಿರಸ್ತ್ರಾಣ (ಹೆಲ್ಮೆಟ್) ಇಲ್ಲವೆಂದು ದಂಡವನ್ನು ವಿದಿಸುತ್ತಿದ್ದರು ಈ ಬಗ್ಗೆ ಪ್ರಶ್ನಿಸಿದಾಗ ನೀವು ಇಲ್ಲೇ ಕಟ್ಟಿದರೆ 250ರೂ ಇಲ್ಲ ನೀವೇ ನ್ಯಾಯಾಲಯದಲ್ಲಿ ಕಟ್ಟುವುದಾರೆ 500ರೂಗಳನ್ನು ಕಟ್ಟಬೇಕಾಗುತ್ತದೆ ಎಂದು ದಂಡವನ್ನು ಹಾಕುತ್ತಿದ್ದರು.
ಈ ಬಗ್ಗೆ ಸಾರ್ವಜನಿಕರು ಆರಕ್ಷಕರು ತಮ್ಮ ಕರ್ತವ್ಯವನ್ನು ಮಾಡುವುದಕ್ಕೆ ನಮ್ಮದೂ ಸಮ್ಮತಿ ಇದೆ ಆದರೆ ಎಂದೋ ಒಂದು ದಿನ ಅವರಿಗೆ ಬೇಕಾದಾಗ ಕೇಸ್ ಮಾಡಲಿಕ್ಕೋಸ್ಕರ ದಿನದ ಕೂಲಿಯನ್ನು ಕಿತ್ತುಕೊಳ್ಳಬಾರದು.ಎಲ್ಲರಿಗೂ ತಿಳಿಯುವಂತೆ ಹೆಲ್ಮೆಟ್ ಕಡ್ಡಾಯಗೊಳಿಸಲಿ ಆಗಾ ಹಾಕಿಕೊಳ್ಳದವರಿಗೆ ದಂಡವನ್ನು ವಿಧಿಸಲಿ ಅದನ್ನು ಬಿಟ್ಟು ಇವರಿಗೆ ಬೇಕಾದಗ ರಸ್ತೆಗಿಳಿದು ದಂಡ ವಸೂಲಿಮಾಡಿದರೆ ಸಾರ್ವಜನಿಕರ ಪಾಡೇನು ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿತ್ತು.
ಹೆಸರೇಳಿಲಿಚ್ಚಿಸದ ಸಾರ್ವಜನಿಕರೊಬ್ಬರು ಹೇಳುವಂತೆ ಹೆಲ್ಮೆಟ್ ನಮ್ಮೆಲ್ಲರ ಪ್ರಾಣವನ್ನು ಉಳಿಸುತ್ತದೆ ಇದು ಎಲ್ಲರಿಗೂ ಗೊತ್ತು ಆದರೆ ಎಲ್ಲಾ ದಾಖಲೆಗಳನ್ನು ಹೊಂದಿದ್ದು ಹೆಲ್ಮೆಟ್ ಇಲ್ಲ ಎಂದು ದಂಡ ವಿಧಿಸುವುದು ಸರಿಯಲ್ಲ, ಹೆಲ್ಮೆಟ್ ಕಡ್ಡಾಯಮಾಡಿ ಚಾಲನ ಪರವಾನಗಿ ಇಲ್ಲದವರಿಗೆ ದಂಡ ಹಾಕುವುದು ದಿನ ನಿತ್ಯವಾದರೆ, ಅಪಘಾತಗಳು ತಪ್ಪುವುದರ ಜೊತೆಗೆ ಸಾರ್ವಜನಿಕರ ಹಣವೂ ಉಳಿಯುತ್ತದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
