ಪ.ಬಂಗಾಳ, ಕೇರಳಗಳಲ್ಲಿ 9 ಅಲ್-ಖೈದಾ ಉಗ್ರರ ಬಂಧನ!

ನವದೆಹಲಿ :

     ರಾಷ್ಟ್ರೀಯ ಭದ್ರತಾ ಪಡೆ (ಎನ್‌ಐಎ) ಕೇರಳ ಮತ್ತು ಪಶ್ಚಿಮ ಬಂಗಾಳದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ 9 ಅಲ್ ಖೈದಾ ಉಗ್ರರನ್ನು ಬಂಧಿಸಿದ್ದಾರೆ.

     ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂಗಳಲ್ಲಿ ಶುಕ್ರವಾರ ದಾಳಿ ಮಾಡಿದ ಎನ್ ಐಎ ಅಧಿಕಾರಿಗಳು 9 ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮುರ್ಶಿದಾಬಾದ್ ನಲ್ಲಿ 6 ಜನ ಅಲ್ ಖೈದಾ ಉಗ್ರರನ್ನು ಬಂಧಿಸಿದ್ದರೆ, ಮೂವರು ಉಗ್ರರನ್ನು ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಇವರ ವಿಚಾರಣೆ ನಡೆದಿದ್ದು, ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link