ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮವು ಹೋಬಳಿ ಕೇಂದ್ರ ಸ್ಥಾನವಾಗಿರುವುದು ಸರಿಯಷ್ಟೆ. ಸದರಿ ಹೋಬಳಿಯು ರಾಜಕೀಯದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದೆ ಎಂಬುದಕ್ಕೆ ಇಲ್ಲಿನ ಮಧುಗಿರಿ ವಿಧಾನ ಸಭಾ ಕ್ಷೇತ್ರದಿಂದ ಚುನಾಯಿತರಾಗಿರುವಂತಹವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ನಾನಾ ಇಲಾಖೆಗಳ ಸಚಿವರಾಗಿ ಅಧಿಕಾರ ನಡೆಸಿ ಈಗ ಶಾಸಕರಾಗಿರುತ್ತಾರೆ.
ಮತ್ತೆ ಓರ್ವ ಶಾಸಕರಾಗಿದ್ದವರು ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾಗಿ ಹಾಗೂ ರಾಜ್ಯ ಅಪೆಕ್ಷ್ ಬ್ಯಾಂಕಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಾಜಿ ಶಾಸಕರಾಗಿರುತ್ತಾರೆ. ಇನ್ನುಳಿದಂತೆ ಇದೇ ಹೋಬಳಿಯವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಮತ್ತೊರ್ವರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಈಗ ಇವರಿಬ್ಬರು ಒಂದೊಂದು ಸರ್ಕಾರಿ ಇಲಾಖೆಯ ನಿರ್ದೇಶಕರಾಗಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುತ್ತಾರೆ.
ಇಷ್ಠೆಲ್ಲಾ ರೀತಿಯ ಬುದ್ದಿವಂತ ಜನಾಂಗದವರಿರುವಂತಹ ಶತಮಾನೋತ್ಸವ ಆಚರಣೆ ಮಾಡಬೇಕಿದ್ದ ಮಿಡಿಗೇಶಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ವಿನಾಶದತ್ತ ಮುಖ ಮಾಡಿರುವುದು ವಿಪರ್ಯಾಸವೆ ಸರಿ. ಈ ಶಾಲೆಯು ಸರ್ಕಾರಿ ಕುವೆಂಪು ಮಾದರಿ ಶಾಲೆಯಾಗಿಯೂ ಮಾರ್ಪಟ್ಟಿದ್ದು, ಅಷ್ಟೆ ಅಲ್ಲದೆ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯೂ ಆಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿವರು ಉನ್ನತ ಮಟ್ಟದ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಕೆಲವರು ನಿವೃತ್ತಿ ಹೊಂದಿದವರೂ ಇದ್ದಾರೆ.
ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಗಂಗಹನುಮಯ್ಯ, ರಾಜವರ್ಧನ್ ರಂತಹ ಘಟಾನುಘಟಿಗಳು ಈ ವ್ಯಾಪ್ತಿಯ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಹೆಸರು ಮಾಡಿದ್ದಾರೆ. ಇಲ್ಲಿ ಒಂದರಿಂದ ಎಂಟನೆ ತರಗತಿಯವರೆವಿಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗೆ ಸಂಬಂಧಿಸಿ ಬಸ್ ನಿಲ್ದಾಣದ ಸಮೀಪವಿರುವ ನಾಲ್ಕು ಕೊಠಡಿಗಳುಳ್ಳ ಕೊಠಡಿಗಳು, ಅಕ್ಷರ-ದಾಸೋಹದ ಕೊಠಡಿಗಳು ಪಾಳು ಬಿದ್ದಿವೆ.
ಒಂದು ಕೊಟಡಿಯನ್ನು ಮಾತ್ರ ಗೃಹರಕ್ಷಕ ದಳದ ಕಚೆರಿಗೆ ಬಳಸಿಕೊಂಡಿದ್ದಾರೆ. ಕಟ್ಟಡದ ಮೇಲ್ಛಾವಣಿಯಲ್ಲಿ ಹುಲ್ಲು ಬೆಳೆದಿದೆ. ಶಾಲಾ ಕಾಂಪೌಂಡ್ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಒಳ-ಹೊರಗೆ ಗಿಡಗೆಂಟೆಗಳು ಬೆಳೆದು ಪಾಳು ಬೀಳುವ ಸ್ಥಿತಿಯಲ್ಲಿದೆ. ಆದರೆ ಸಂಬಂಧಿಸಿದವರಾರೂ ಇತ್ತಕಡೆ ಗಮನ ಹರಿಸಿಲ್ಲದಿರುವುದು ವಿಪರ್ಯಾಸವಾಗಿದೆ. ಇನ್ನಾದರೂ ತುರ್ತಾಗಿ ಇತ್ತಕಡೆ ಗಮನ ನೀಡಿ ದುರಸ್ತಿ ಕೈ ಗೊಳ್ಳಲಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








