ತಿಪಟೂರು
ನಗರದ ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿದ್ದು, ಸಂಚರಿಸಲು ಯಮಯಾತನೆಪಡುವಂತಾಗಿವೆ.ಇಂತದರಲ್ಲಿ ಹೇಗೊ ಚೆನ್ನಾಗಿದ್ದ ದೊಡ್ಡಪೇಟೆ ರಸ್ತೆಯಲ್ಲಿ ಯುಜಿಡಿ ಕಾಮಗಾರಿಗಾಗಿ ರಸ್ತೆ ಅಗೆದು ಸಮರ್ಪಕವಾಗಿ ಮುಚ್ಚದೇ ಇನ್ನಷ್ಟು ಅಧ್ವಾನ ಮಾಡಲಾಗಿದೆ. ಈ ಬಗ್ಗೆ ನಗರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಪೌರಾಯುಕ್ತರು ಮತ್ತೆ ಮಣ್ಣನ್ನು ಮುಚ್ಚಿಸಿ ದುರಸ್ಥಿ ಮಾಡಿಸಿದ್ದರು. ಈಗ ಮಳೆಯಿಂದಾಗಿ ಮುಚ್ಚಿದ್ದ ಗುಂಡಿಗಳು ಮತ್ತೆ ಬಾಯ್ತೆರೆದಿವೆ.
ಇದರಿಂದಾಗಿ ದಿನನಿತ್ಯ ಇಲ್ಲಿ ವಾಹನಗಳು ಗುಂಡಿಯೊಳಗೆ ಸಿಲುಕಿಕೊಂಡು ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮೊದಲೇ ಕಿರಿದಾಗಿರುವ ರಸ್ತೆಯಲ್ಲಿ ಸಂಪೂರ್ಣವಾಗಿ ವಾಹನಗಳ ದಟ್ಟಣೆ ಹೆಚ್ಚಾಗುತ್ತದೆ. ಈ ಸಮಸ್ಯೆ ನಿವಾರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
