ಬೆಂಗಳೂರು : ನಮ್ಮ ಮೆಟ್ರೋದ 28 ಸಿಬ್ಬಂದಿಗೆ ಕೊರೋನಾ ದೃಢ!!

ಬೆಂಗಳೂರು:

     ನಮ್ಮ ಮೆಟ್ರೋದ 28 ಮಂದಿ ಲೋಕೋ ಪೈಲಟ್‌ಗಳು ಹಾಗೂ ಸ್ಟೇಷನ್‌ ಕಂಟ್ರೋಲರ್‌ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಸೆಪ್ಟೆಂಬರ್ 7 ರಂದು ಮೆಟ್ರೋ ಪುನರಾರಂಭವಾದ ನಂತರ ಲೊಕೊ ಪೈಲಟ್‌ಗಳು ಮತ್ತು ಸ್ಟೇಷನ್ ಕಂಟ್ರೋಲರ್‌ಗಳು ಸೇರಿದಂತೆ ಒಟ್ಟು 28 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿ ನಿತ್ಯವೂ ಲೋಕೋಪೈಲಟ್‌ಗಳ ಪರೀಕ್ಷೆ ಮಾಡಿಸುತ್ತಿದ್ದು, 6 ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ತಗುಲಿದೆ.

     ಕೋವಿಡ್-19 ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ತನ್ನದೇ ಸಿಬ್ಬಂದಿಗಳನ್ನು ಮಹಾಮಾರಿಯಿಂದ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.

     ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚರಿಸಲಿದ್ದು, 450 ಲೋಕೋ ಪೈಲಟ್‌ಗಳು ಹಾಗೂ ಸ್ಟೇಷನ್ ಕಂಟ್ರೋಲರ್‌ಗಳು ಕೆಲಸ ನಿರ್ವಹಿಸುತ್ತಾರೆ. ಕೆಲಸಕ್ಕೆ ಬರುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಹಾಗೂ ಟೆಂಪರೇಚರ್ ಚೆಕ್ ಮಾಡಲಾಗುತ್ತಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link