ನವದೆಹಲಿ :
ಜಗತ್ತಿನ ಅತ್ಯಂತ ಉದ್ದವಾದ ಅಟಲ್ ಸುರಂಗ ಮಾರ್ಗವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.
ಹಿಮಾಚಲಪ್ರದೇಶದ ರೋಹ್ಟಂಗ್ನಲ್ಲಿ ನಿರ್ಮಾಣವಾಗಿರುವ ಈ ಸುರಂಗ ಮಾರ್ಗ ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುತ್ತದೆ.
A historic day indeed . Hon’ble PM @narendramodi dedicates #AtalRohtangTunnel to nation . pic.twitter.com/0FxWgJGyS6
— V.Saran (@TheSaran_TNBJP) October 3, 2020
ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾಗಿದ್ದ ಈ ಸುರಂಗ ಮಾರ್ಗಕ್ಕೆ 2002ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಮನಾಲಿ-ಲೇಹ್ ನಡುವೆ 3300 ಕೋಟಿ ರೂ. ವೆಚ್ಚ ಮಾಡಿ ಸತತ 28 ವರ್ಷಗಳ ಕಾಲ ಶ್ರಮ ವಹಿಸಿ ನಿರ್ಮಿಸಿರುವ 9.02ಕಿ.ಮೀ. ಉದ್ದದ ಈ ಸುರಂಗ ಮಾರ್ಗಕ್ಕೆ ಅಟಲ್ ಸುರಂಗ ಮಾರ್ಗ ಎಂದು ನಾಮಕರಣ ಮಾಡಲಾಗಿದೆ.
ಈ ಸುರಂಗ ಮಾರ್ಗ ನಿರ್ಮಾಣದಿಂದ ಮನಾಲಿ ಮತ್ತು ಲೇಹ್ ನಡುವಿನ ಅಂತರವನ್ನು 46ಕಿ.ಮೀ.ನಷ್ಟು ತಗ್ಗಿಸುವುದರ ಜತೆಗೆ ಐದು ತಾಸುಗಳ ಅವ ಉಳಿತಾಯವಾಗಲಿದ್ದು, ಯಾವುದೇ ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಸಾರ್ವಜನಿಕರು ಪ್ರಯಾಣ ಮಾಡಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ