ಬೆಂಗಳೂರು :
ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮುಚ್ಚಿದ್ದ ಬೆಂಗಳೂರು ಮಹಾನಗರದ ಹೆಗ್ಗುರುತಾಗಿರುವ ಇಸ್ಕಾನ್
ದೇವಾಲಯದ ದ್ವಾರಗಳು 2020 ರ ಅಕ್ಟೋಬರ್ 5 ರಂದು ಮತ್ತೆ ತೆರೆಯಲು ಸಜ್ಜಾಗಿದೆ.
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನ್ ಲಾಕ್ ಮಾರ್ಗಸೂಚಿಯ ಪ್ರಕಾರ ಧಾರ್ಮಿಕ ಕಾರ್ಯಕಲಾಪಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ವಾರದ ದಿನಗಳಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30 ರವರೆಗೆ, ಸಂಜೆ 4ರಿಂದ 8ರವರೆಗೆ ಹಾಗೂ ವಾರಾಂತ್ಯಗಳಲ್ಲಿ ಬೆಳಗ್ಗೆ 9:30ರಿಂದ ರಾತ್ರಿ 8ರವರೆಗೆ ಭಕ್ತರು ಕೃಷ್ಣನ ದರ್ಶನ ಪಡೆಯಲು ಅವಕಾಶವಿದೆ.
ಶ್ರೀ ಕೃಷ್ಣನ ದರ್ಶನದ ವೇಳೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಸುರಕ್ಷಿತ ದೃಷ್ಟಿಯಿಂದ 10 ವರ್ಷದೊಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರ ಪ್ರವೇಶವನ್ನ ನಿಷೇಧಿಸಲಾಗಿದೆ.
ದೇವಾಲಯದ ಭಜನೆಗಳು ಮತ್ತು ಭಗವತ್ ಗೀತಾ ಪಠಣಗಳು ಸಹ ಪುನರಾರಂಭಗೊಳ್ಳಲಿವೆ.