ತಿಪಟೂರು :
ಭಾರತದಲ್ಲಿ ಮಳೆಯು ರೈತರೊಂದಿಗೆ ಜೂಜಾಟವಾಡುತ್ತದೆಂದು ತಿಳಿಸಿದ್ದಾರೆ. ಅದರಂತೆ ಈ ಬಾರಿ ಉತ್ತಮವಾದ ಮಳೆಯಿಮದಾಗಿ ರೈತರು ಹರ್ಷಗೊಂಡಿದ್ದರು ಅದರಂತೆ ಸೂಕ್ತಸಮಯದಲ್ಲಿ ಹಿಂಗಾರನ್ನು ಆರಂಭಿಸಿ ಭಿತ್ತನೆ ಕಾರ್ಯವನ್ನು ಮುಗಿಸಿದ್ದರು ಇನ್ನೇನು ಬೆಳೆ ಹುಲುಸಾಗಿ ಬೆಳೆದಿದೆ ಎನ್ನುವಾಗ ಮತ್ತೆ ಮಳೆ ಕೈಕೊಟ್ಟಿದ್ದು ಅನ್ನದಾತರ ಮೊಗವು ಬೆಳೆಯಂತೆ ಬಾಡಿಹೋಗಿದೆ.
ಈ ಬಾರಿಯ ಹಿಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದ ರೈತರ ಮೊಗ ಹೊಸಪೈರಿನಂತೆ ನಳನಳಿಸುತ್ತಿತ್ತು ಇದೇ ಸಂದರ್ಭದಲ್ಲಿ ರೈತರು ಈ ಬಾರಿ ನಮಗೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಮತ್ತು ಮಣ್ಣನ್ನು ನಂಬಿಕೆಟ್ಟವರಿಲ್ಲವೆಂಬವಾಣಿಯಂತೆ ಕೊರೊನಾ ಮಹಾಮಾರಿಯ ನಡುವೆಯು ಎಲ್ಲವನ್ನು ಮರೆತು ನಾಟಿಮಾಡಿದ್ದರು.
ಆದರೆ ಮೊಮೊದಲು ಚೆನ್ನಾಗಿ ಬಂದ ಮಳೆಯು ಕಳೆದ ಹದಿನೈದು ದಿನಗಳಿಂದ ಭೂಮಿಯತ್ತ ಸುಳಿಯುತ್ತಲೇ ಇಲ್ಲ ಈ ತಿಂಗಳ ಮೊದಲವಾರದಲ್ಲಿ ಇನ್ನೇನು ಬೆಳೆ ಕೈಕೊಡುತ್ತದೆ ಎನ್ನುವ ಸಮಯದಲ್ಲಿ ಧಾವಿಸಿದ ಮಳೆಯು ಪೈರಿಗೆ ಸ್ವಲ್ಪ ಜೀವದಾನವನ್ನು ನೀಡಿತ್ತು. ಆದರೆ ಸೆಪ್ಟಂಬರ್ 16ರಿಂದ ಆರಂಭವಾದ ಅನುರಾಧ ಮಳೆಯು ಸಂಪೂರ್ಣವಾಗಿ ವಿಫಲವಾಗಿದ್ದು ರಾಗಿಬೆಳೆಯನ್ನು ಬಾಡಿಸಿದೆ.
ಈಗ ರಾಗಿಯು ಕಾಳುಕಟ್ಟುವ ಹಂತದತ್ತ ಸಾಗುತ್ತಿದ್ದು ಈ ಸಮಯದಲ್ಲಿ ಮಳೆ ಕೈಕೊಟ್ಟರೆ ರಾಗಿಯು ಸಂಪೂರ್ಣವಾಗಿ ನೆಲಕಚ್ಚುತ್ತದೆ ಎಂಬುದು ಮೊದಲು ರಾಗಿಹಾಕಿದವರ ಕಥೆಯಾಗಿದೆ. ಇದರಲ್ಲಿ ಕೆಲವರು ಬೋರ್‍ವೆಲ್ ಮೂಲಕ ನೀರನ್ನು ಹಾಯಿಸಿ ಬೆಳೆಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮುಂಗಾರಿನ ಕೊನೆಯಲ್ಲಿ ರಾಗಿಯನ್ನು ಬಿತ್ತನೆ ಮಾಡಿದವರಿಗೆ ರಾಗಿಯನ್ನು ಸೂಕ್ತಸಮಯದಲ್ಲಿ ಅರಗು ಸಾಧ್ಯವಾದೆ ಸೂಕ್ತ ಗೊಬ್ಬರವನ್ನು ನೀಡಿಲ್ಲದೇ ರಾಗಿಯು ಕೊರೊನಾ ಬಾದಿತರಂತೆ ಕೊರಗುತ್ತಿದೆ.
ಅನುರಾಧ ಮಳೆ ಇನ್ನು ಅಕ್ಟೋಬರ್ 10ರ ವರೆಗೂ ಇದ್ದು ಬಂದರೆ ಒಳ್ಳೆಯದು ಇಲ್ಲದಿದ್ದರೆ ಮೊದಲು ಬಿತ್ತನೆ ಮಾಡಿದ ರಾಗಿಯು ಕೈಸೇರುವುದು ಅನುಮಾನ ಇನ್ನು ಕೊನೆಪಾಳಿಯಲ್ಲಿ ಬಿತ್ತನೆ ಮಾಡಿದ ರೈತರಿಗೆ ಚಿತ್ತಾ ಮಳೆಏನಾದರು ಬಂದರೆ ಅಲ್ಪಸ್ವಲ್ಪ ಬೆಳೆ ಕೈಸೇರಬಹುದೆಂದು ಚಿತ್ತಾ ಮಳೆಯತ್ತ ದೃಷ್ಟಿ ನೆಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ