ರಾಮನಗರ :
ನನ್ನ ಮಗನನ್ನು ಕಂಡರೆ ಸರ್ಕಾರ ಮತ್ತು ಅಧಿಕಾರಿಗಳಿಗೆ ತುಂಬಾನೇ ಪ್ರೀತಿ. ಹಾಗಾಗಿ ಪದೇ ಪದೆ ನನ್ನ ಮಗನನ್ನ ‘ಟಾರ್ಗೆಟ್ ಮಾಡ್ತಿದ್ದಾರೆ’ ಎಂದು ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಹೇಳಿದ್ದಾರೆ.
ಇಂದು ಬೆಳ್ಳಂಬೆಳಗ್ಗೆಯೇ ಡಿಕೆಶಿ ಮತ್ತು ಡಿಕೆ ಸುರೇಶ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ. ಇದಕ್ಕೆ ಪ್ರತಿಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಈ ಬೆನ್ನೆಲ್ಲೇ ಡಿಕೆಶಿ ತಾಯಿ ಗೌರಮ್ಮ ಪ್ರತಿಕ್ರಿಯಿಸಿದ್ದು, ‘ನನ್ನ ಮಗನನ್ನು ಕಂಡ್ರೆ ED, PD, CD, CBIನವರಿಗೆ ತುಂಬಾ ಪ್ರೀತಿ. ಅದಕ್ಕೆ ಅವನನ್ನ ಬಿಡಲ್ಲ ಎಂದು ಹೇಳಿದ್ದಾರೆ. ಬೇಕಿದ್ರೇ ಅವನನ್ನ ತಮ್ಮ ಮನೆಗೆ ಕರೆಸಿಕೊಂಡು ಹೋಗ್ಲಿ. ಬೇಕಿದ್ರೆ ನನ್ನನ್ನೂ ಅವರ ಮನೆಗೆ ಕರೆದುಕೊಂಡು ಹೋಗಲಿ. ಆದರೆ, ಟೈಂ ಟೈಂಗೆ ಊಟ ಹಾಕಿ ಸಾಕು’ ಎಂದು ಲೇವಡಿ ಮಾಡಿದ್ದಾರೆ.
ಇನ್ನು ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ಅವರ ಬೆಂಬಲಿಗರು ಬೆಂಗಳೂರು, ಕೋಲಾರ, ರಾಮನಗರ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ