ಸುಳ್ಯ :

ಇಂದು ಬೆಳ್ಳಂಬೆಳಿಗ್ಗ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ, ಕೊಲೆ ಆರೋಪಿಯನ್ನು ಕೊಲೆಗೈದು ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ಗುಂಡೇಟು ತಗಲಿದ ವ್ಯಕ್ತಿಯನ್ನು ಸಂಪತ್ ಎಂದು ಗುರುತಿಸಲಾಗಿದೆ. ಈತ ಬಿಜೆಪಿ ಹಾಗು ಸಾಮಾಜಿಕ ಕಾರ್ಯಕರ್ತ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು ಎನ್ನಲಾಗಿದೆ.
ಬೆಳಗ್ಗೆ 6 ಗಂಟೆಗೆ ಸಂಪತ್ ತನ್ನ ನಿವಾಸದಿಂದ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅವರ ಕಾರಿನ ಮೇಲೆ ಮತ್ತೊಂದು ಕಾರಿನಲ್ಲಿ ಬಂದಂತ ಅಪರಿಚಿತರ ಗುಂಪೊಂದು, ನಾಡ ಬಂದೂಕಿನಿಂದ ಗುಂಡಿನ ದಾಳಿ ಗೈದಿದೆ. ಗುಂಡಿನ ದಾಳಿಯ ವೇಳೆ ಗಾಯಗೊಂಡು, ರಕ್ಷಣೆಗಾಗಿ ಪಕ್ಕದಲ್ಲೇ ಇದ್ದಂತ ವ್ಯಕ್ತಿಯೊಬ್ಬರ ಮನಹೊಕ್ಕರು ಬಿಡದಂತ ಆರೋಪಿಗಳು, ಮನೆಗೂ ನುಗ್ಗಿ ಸಂಪತ್ ಅವರ ಮೇಲೆ ಗುಂಡುಹಾರಿಸಿ ಪರಾರಿಯಾಗಿದ್ದಾರೆ.
ತೀವ್ರವಾಗಿ ಗಾಯೊಂಡ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಕೊಲೆ ಪ್ರಕರಣದ ಆರೋಪಿ ಸಂಪತ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಹಾಗೂ ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








