ತಿಪಟೂರು :
ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲಿನ ನಡೆದಿರುವ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಮತ್ತು ಅತ್ಯಾಚಾರದಲ್ಲಿ ಭಾಗಿಯಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಮೂಲ ಮಾತೃಸಂಸ್ಥೆ)ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಅರೆಬೆತ್ತಲೆ ಪಂಜಿನಮೆರವಣಿಗೆ ಮಾಡಲಾಯಿತು.
ನಗರಸಭೆ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ದ ಘೋಷಣೆ ಆಕ್ರೋಶ ವ್ಯಕ್ತಪಡಿದ ಪ್ರತಿಭಟನಾಕಾರರು ಬಿ.ಹೆಚ್ ರಸ್ತೆ ಮೂಲಕ ಸಾಗಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ಘೋಷಣೆ ಕೂಗಿ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿ, ನಂತರ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿಪತ್ರಸಲ್ಲಿಸಲಾಯಿತು
ಪ್ರತಿಭಟನೆ ಉದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದೇಶದಲಿ ಜಗಲ್ ರಾಜ್ಯ ವ್ಯವಸ್ಥೆ ನಿರ್ಮಾಣವಾಗುತ್ತಿದ್ದೆ ಗುಂಡಾಗಳು ಹತ್ಯಾಚಾರಿಗಳ ಪರ ಸರ್ಕಾರಗಳು ವಕಾಲತ್ತು ವಹಿಸುತ್ತಿವೆ ರಾಮನ ಹೆಸರಲಿ ಅಧಿಕಾರ ಹಿಡಿದ ಬಿ.ಜೆ.ಪಿ ರಾವಣನ ಆಡಳಿತ ನಡೆಸುತ್ತಿದೆ ಇದೆಯಾ ಯೋಗಿ ಆದಿತ್ಯನಾಥರ ರಾಮರಾಜ್ಯ ಎನ್ನುವಂತಾಗಿದ್ದು ದಲಿತರ ಮೇಲೆ ದೌರ್ಜನ್ಯ ಮಹಿಳೆಯರ ಮೇಲೆ ಹತ್ಯಾಚಾರಗಳು ಇದೇ ರೀತಿ ಮುಂದುವರಿದರೆ ದೇಶದಲ್ಲಿಮನೆಗೊಬ್ಬಳು ಪೂಲಂದೇವಿಯವರು ಹುಟ್ಟುತ್ತಾರೆ. ಉತ್ತರ ಪ್ರದೇಶದ ಹತ್ರಾಸ್ ದಲಿತ ಯುವತಿ ಮನೀಷ ವಾಲ್ಮೀಕಿ ಮೇಲೆ ಹತ್ಯಾಚಾರ ನಡೆಸಿರುವ ಆರೋಪಿಗಳಿಗೆ ಶಿಕ್ಷೆ ನೀಡಲು ಸರ್ಕಾರ ಮೀನಾ-ಮೇಷ ಎಣಿಸುತ್ತಿದ್ದು, ಪ್ರಕರಣದ ದಾರಿ ತಪ್ಪಿಸಲು ಹೊರಟಿರುವ ಪೋಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಯ ನಡೆ ಅನುಮಾನಸ್ಪದ ವಾಗಿದೆ ಬಂಧಿಸಿರುವ ನಾಲ್ವರು ಆರೋಪಿಗಳನ್ನ ತೆಲಂಗಾಣ ಮಾದರಿಯಲ್ಲಿ ಕೂಡಲೇಮರಣದಂಡನೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಛಲವಾದಿ ಮಹಾಸಭಾದ ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಯುವತಿ ಮೇಲೆ ನಡೆದಿರುವ ಹೀನ ಕೃತ್ಯವನ್ನು ಇಡಿ ದೇಶವೆ ಖಂಡಿಸುತ್ತಿದೆ. ಅತ್ಯಾಚಾರ ನಡೆಸಿರುವ ಆರೋಪಿಗಳು, ಆಕೆಯ ಕೈ, ಕಾಲು ಮುರಿದು ನಾಲಿಗೆ ಕತ್ತರಿಸಿ ಸತ್ಯ ನುಡಿಯದಂತೆ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ವಿಚಾರ.
ಈ ಪ್ರಕರಣವನ್ನು ಕೂಲಂಕುಷ ತನಿಖೆಗೆ ಒಳಪಡಿಸಬೇಕೆಂದ ಅವರು ತೆಲಂಗಾಣದಲ್ಲಿ ವೈದ್ಯೆಯ ಮೇಲೆ ಹತ್ಯಾಚಾರ ನಡೆದಾಗ ಕೇಂದ್ರ ಸರ್ಕಾರ ಮುತುವರ್ಜಿವಹಿಸಿ ಎನ್‍ಕೌಂಟರ್ ಮಾಡಿಸಿತು ಆದರೆ ದಲಿತ ಯುವತಿಯರ ಮೇಲೆ ಅತ್ಯಾಚಾರಗಳಾದಾಗ ಮೃದುದೊರಣೆ ಅನುಸರಿಸುತ್ತಿದ್ದೆ.ಮಾನವೀಯತೆ ಇಲ್ಲದೆ ಠಾಕೂರ್ ಸಮುದಾಯದ ಮತಗಳಿಗಾಗಿ ಅಪರಾಧಿಗಳ ರಕ್ಷಣೆಗೆ ಮುಂದಾಗಿರುವುದು ಖಂಡನೀಯ. ವಿಶ್ವನಾಯಕರೆಂದು ಬೀಗುವ ಪ್ರಧಾನಿ ನರೇಂದ್ರ ಮೋದಿಯವರು ಕೂಡಲ್ಲೆ ದಲಿತರಿಗೆ ಸೂಕ್ತ ನ್ಯಾಯ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೊಕು ಸಂಚಾಲಕ ನಾಗ್ತಿಹಳ್ಳಿ ಕೃಷ್ಣಮೂರ್ತಿ, ಪ್ರಭು ಹೊನ್ನವಳ್ಳಿ, ಕುಂದೂರು ಮುರುಳಿ, ಕುಪ್ಪಾಳು ರಂಗಸ್ವಾಮಿ, ಮುಂತಾದವರು ಉಪಸ್ಥಿತರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ