ಉಪಚುನಾವಣೆಯಲ್ಲಿ ಜನವಿರೋಧಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲಿದ್ದಾರೆ : ಸಿದ್ದರಾಮಯ್ಯ

ಶಿರಾ:
 
     ರಾಜ್ಯದಲ್ಲಿ ಹಿಂದಿನ ಬಾಗಿಲಿನಿಂದ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರ ಅತ್ಯಂತ ಕೆಟ್ಟ, ಜನವಿರೋಧಿ, ನಿಷ್ಕ್ರೀಯವಾದ, ಲೂಟಿ ಹೊಡೆಯುತ್ತಿರುವ ಸರಕಾರವಾಗಿದ್ದು, ನ.3 ರಂದು ನಡೆಯುವ ಉಪ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಸೋಲಿಸುವ ಮೂಲಕ ತಾಲ್ಲೂಕಿನ ಜನತೆ ಅವವರ ಅರಾಜಕತೆಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

     ಶಿರಾ ವಿಧಾನಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರೊಂದಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜನರು ಈ ಚುನಾವಣೆಯ ಮೂಲಕ ಎಚ್ಚರಿಕೆ ಗಂಟೆ ಭಾರಿಸಬೇಕಿದೆ. ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು ಹಣ ಲೂಟಿ ಹೊಡೆವುದೇ ಒಂದು ಕಾಯಕವನ್ನಾಗಿ ಮಾಡಿಕೊಂಡಿದೆ ಮತ್ತು ಸರ್ಕಾರದ ಬಳಿ ರಾಜ್ಯ ನಡೆಸುವುದಿರಲಿ ಸರಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಹಣವಿಲ್ಲಾ . ಜನರು ಈ ಚುನಾವಣೆಯ ಮೂಲಕ ಈ ನೀತಿಗೆಟ್ಟ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.

   ಹೆಚ್.ಡಿ.ರೇವಣ್ಣ ಅವರು ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದಿದ್ದಾರಲ್ಲ ಎಂದು ಕೇಳಿದಾಗ  ನಾನು ರಾಜ್ಯ ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಹೆಚ್.ಡಿ.ರೇವಣ್ಣ ಆಗಿನ್ನೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅವರಿಗೇನು ಗೊತ್ತು ಜೆಡಿಎಸ್ ಬಗ್ಗೆ ಅವರ‍್ಯಾರು ನನಗೆ ಹೇಳಲು ಎಂದರು. ಬಿಜೆಪಿಯವರು ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಹೇಳಿಕೊಳ್ಳುತ್ತಿದ್ದಾರಲ್ಲಾ  ಎಂಬ ಪ್ರಶ್ನೆಗೆ ಉತ್ತರಿಸಿದ ಅವರು  ಇವತ್ತಿನವರೆಗೂ ಅವರು ಶಿರಾದಲ್ಲಿ, ಮತ್ತು ಆರ್.ಆರ್.ನಗರದಲ್ಲಿ ಯಾವಾಗಲಾದರೂ ಗೆದ್ದಿದ್ದಾರೇ  ಅವರೇ ತಿಳಿಸಲಿ ಎಂದರು.

   ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಶಿರಾದಲ್ಲಿ ಕಾಂಗ್ರೆಸ್ ಅಭಿಮಾನಿಗಳು ತೋರಿಸುತ್ತಿರುವ ವಿಶ್ವಾಸ ನನಗೆ ಹೃದಯ ತುಂಬಿ ಬರುತ್ತಿದೆ. ನಾನು ಅಭಾರಿ, ಈ ಚುನಾವಣೆ ಗೆಲುವು ನಮ್ಮದೇ ಎನ್ನುವುದನ್ನು ಈ ಅಪಾರ ಜನಸ್ತೋಮವೇ ನಮಗೆ ತಿಳಿಸುತ್ತಿದೆ ಎಂದರು.

    ಜನರು ಈ ಚುನಾವಣೆಯ ಫಲಿತಾಂಶದ ಮುಖಾಂತರ ಈಗಿನ ಸರಕಾರದ ಆಡಳಿತ ಸರಿಯಿಲ್ಲ ಎಂಬುದನ್ನು ತೋರಿಸಬೇಕು. ಈ ರಾಜ್ಯದಲ್ಲಿ ಶಾಂತಿ ಕಾಪಾಡುವುದು, ರೈತರು, ಮಹಿಳೆಯರು, ಯುವಕರು ಮತ್ತು ಎಲ್ಲಾ ವರ್ಗದವರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಟಿ.ಬಿ.ಜಯಚಂದ್ರ ಉತ್ತಮ ನಾಯಕ ಅವರಿಗೆ ಜನತೆ ಆರ್ಶೀವಾದ ಮಾಡಲೇಬೇಕು ಎಂದು ಎಲ್ಲರ ಪರವಾಗಿ ನಾನು ಕೇಳಿಕೊಳ್ಳುತ್ತೇನೆ ಎಂದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link