ತುಮಕೂರು
ಜಿಲ್ಲೆಯಲ್ಲಿ ಶನಿವಾರ 200 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 18,007ಕ್ಕೆ ಏರಿಕೆಯಾಗಿದೆ. ಸೋಂಕಿತರು ಹಾಗೂ ಸೋಂಕು ಇದ್ದೂ ಅನ್ಯ ಕಾರಣದಿಂದ ಇಬ್ಬರು ಮೃತಪಟ್ಟಿದ್ದಾರೆ.
ತುಮಕೂರಿನ 70ವರ್ಷದ ಗಂಡಸು, ತಿಪಟೂರು ತಾಲ್ಲೂಕು ಗುಂಗುರುಮೆಳೆ ಗ್ರಾಮದ 75 ವರ್ಷದ ಗಂಡಸು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿನಿಂದ ಸತ್ತ 246 ಹಾಗೂ ಅನ್ಯ ಕಾರಣದಿಂದ ಅಸು ನೀಗಿದ 133 ಜನ ಸೇರಿ ಒಟ್ಟು 379 ಜನ ಮೃತಪಟ್ಟಿದ್ದಾರೆ.
ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಶನಿವಾರ 276 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 15,456 ಮಂದಿ ಗುಣಮುಖರಾದಂತಾಗಿದೆ. ಆದರೆ, ಜಿಲ್ಲೆಯಲ್ಲಿ 2,172 ಸೋಂಕು ಸಕ್ರಿಯ ಪ್ರಕರಣಗಳಿವೆ. ಶನಿವಾರ ವರದಿಯಾದ 200 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 99 ಜನರಿಗೆ ಸೋಂಕು ಖಚಿತವಾಗಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 11, ಗುಬ್ಬಿ ತಾಲ್ಲೂಕಿನ 4, ಕೊರಟಗೆರೆ ತಾಲ್ಲೂಕಿನ 6, ಕುಣಿಗಲ್ ತಾಲ್ಲೂಕಿನ 20, ಮಧುಗಿರಿ ತಾಲ್ಲೂಕಿನ 4, ಪಾವಗಡ ತಾಲ್ಲೂಕಿನ 8, ಶಿರಾ ತಾಲ್ಲೂಕಿನಲ್ಲಿ 10, ತಿಪಟೂರು ತಾಲ್ಲೂಕಿನ 20, ತುರುವೇಕೆರೆ ತಾಲ್ಲೂಕಿನಲ್ಲಿ 20 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇದರಲ್ಲಿ ಪುರುಷರು 119, ಮಹಿಳೆಯರು 84, ಮಕ್ಕಳು ಇಬ್ಬರು ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ 46 ಜನ ಸೇರಿದ್ದಾರೆ.
ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 17,807 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 6346, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 1117, ಗುಬ್ಬಿ ತಾಲ್ಲೂಕಿನ 1298, ಕೊರಟಗೆರೆ ತಾಲ್ಲೂಕಿನ 899, ಕುಣಿಗಲ್ ತಾಲ್ಲೂಕಿನ 1122, ಮಧುಗಿರಿ ತಾಲ್ಲೂಕಿನ 1212, ಪಾವಗಡ ತಾಲ್ಲೂಕಿನ 1509, ಶಿರಾ ತಾಲ್ಲೂಕಿನಲ್ಲಿ 1476, ತಿಪಟೂರು ತಾಲ್ಲೂಕಿನ 1811, ತುರುವೇಕೆರೆ ತಾಲ್ಲೂಕಿನಲ್ಲಿ 1017 ಪ್ರಕರಣ ವರದಿಯಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
