ಗುಬ್ಬಿ
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ತಾಲ್ಲೂಕಿನ ಪ್ರಮುಖ ಕೃಷಿ ಬೆಳೆಯಾದ ರಾಗಿ ಬೆಳೆ ನಿರೀಕ್ಷೆಗೂ ಮೀರಿ ಉತ್ತಮವಾಗಿ ಬೆಳೆದಿತ್ತು ಆದರೆ ಕಳೆದ ರಾತ್ರಿ ಬಿದ್ದ ಭಾರಿ ಮಳೆಗೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಉತ್ತಮವಾಗಿ ಬೆಳೆದು ನಿಂತಿದ್ದ ರಾಗಿ ಹೊಲಗಳು ಮಳೆಯ ರಭಸಕ್ಕೆ ನೆಲಕ್ಕುರುಳಿದ್ದು ರೈತರಿಗೆ ತೀವೃ ಆತಂಕ ಸೃಷ್ಠಿಯಾಗಿದೆ.
ಬಹುತೇಕ ರಾಗಿ ಬೆಳೆಗಳು ಕಾಳುಕಟ್ಟುತ್ತಿದ್ದು ಮಳೆ ಹೆಚ್ಚಾದರೆ ಬೆಳೆದು ನಿಂತಿರುವ ರಾಗಿ ಹೊಲಗಳು ನೆಲಕ್ಕೆ ಉರುಳುವ ಸಾಧ್ಯತೆ ಇದ್ದು ರೈತರು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಉತ್ತಮ ಮಳೆಯಾಗಿದ್ದರಿಂದ ರ್ಯತರು ರಾಗಿ ಹೊಲಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಹಾಕಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದರು ಆದರೆ ಮಳೆ ನಿರಂತರವಾಗಿ ಬೀಳುತ್ತಿರುವುದರಿಂದ ರೈತರ ಆಸೆ ನಿರಾಸೆಯಾಗುತ್ತಿದೆ.
ಮುಂದಿನ ದಿನಗಳಲ್ಲಾದರೂ ಮಳೆ ಪ್ರಮಾಣ ಕಡಿಮೆಯಾದರೆ ಈ ಭಾರಿ ನಿರೀಕ್ಷೆಗೂ ಮೀರಿ ರಾಗಿ ಬೆಳೆ ಇಳುವರಿ ಬರಲಿದೆ. ತಾಲ್ಲೂಕಿನ ಹಲವು ಕಡೆಗಳಲ್ಲಿ ಈಗಾಗಲೆ ರಾಗಿ ಬೆಳೆ ಕಾಳುಕಟ್ಟುತ್ತಿದ್ದು ಇಂತಹ ರಾಗಿ ಹೊಲಗಳಿಗೆ ಮಳೆ ಸಾಕಾಗಲಿದೆ. ಇನ್ನು ಕೆಲವು ಕಡೆಗಳಲ್ಲಿ ತಡವಾಗಿ ಬೆಳೆ ನಾಟಿ ಮಡಿದ ಹೊಲಗಳಿಗೆ ಮಳೆ ಅವಶ್ಯಕತೆ ಇದ್ದು ಇದೀಗ ಬೇಳುತ್ತಿರುವ ಮಳೆ ಅನುಕೂಲವಾಗುತ್ತಿದೆ ಆದರೆ ಈಗಾಗಲೆ ಕಾಳುಕಟ್ಟುತ್ತಿರುವ ರಾಗಿ ಹೊಲಗಳಿಗೆ ಒಂದೆರೆಡು ಭಾರಿ ಮಳೆ ಬಂದರೆ ಸಾಕು ಕೊಯ್ಲಿಗೆ ಸಿದ್ದವಾಗುತ್ತವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ