ಹುಳಿಯಾರು:
ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಮಠಕ್ಕೆ ಮಾನವ ಕಂಪ್ಯೂಟರ್ ಬಸವರಾಜ್ ಉಮ್ರಾಣಿ ಅವರು ಭೇಟಿ ನೀಡಿ ಪೂಜ್ಯರಿಂದ ಗುರುರಕ್ಷೆ ಸ್ವೀಕರಿಸಿದರು.
ಬೆಳಗಾಂ ಜಿಲ್ಲೆಯ ಅಥಣಿ ತಾಲ್ಲೂಕಿನ ಬಸವರಾಜ್ ಶಂಕರ್ ಉಮ್ರಾಣಿ ಅದ್ಭುತ ಜ್ಞಾಪಕ ಶಕ್ತಿಯ ಗಣಿ. ಅಂಧರಾಗಿರುವ ಇವರ ಸಾಧನೆಗೆ ಸಾಟಿ ಇಲ್ಲ. ಕೇವಲ ಸಂಖ್ಯೆಗಳನ್ನು ಹೇಳಿದರೆ ಸಾಕು ಯಾರ ಸಹಾಯವೂ ಇಲ್ಲದೆ ವಾರ, ದಿನ, ತಿಂಗಳುಗಳನ್ನು ಹೇಳುವ ನಡೆದಾಡುವ ಪಂಚಾಂಗ ಎಂದರೆ ತಪ್ಪಾಗಲಾರದು.
ನೋಟುಗಳ ಮೌಲ್ಯ, ರಾಷ್ಟ್ರೀಯ ನಾಯಕರ ಜನ್ಮ ದಿನಾಂಕ, ಮರಣದ ದಿನಾಂಕವನ್ನು ಕರಾರುವಕ್ಕಾಗಿ ಹೇಳುತ್ತಾರೆ. ಗಣಿತ ಇವರಿಗೆ ನೀರು ಕುಡಿದಷ್ಟು ಸುಲಭ. ಇವರ ಸ್ಮರಣ ಶಕ್ತಿ, ಬುದ್ಧಿಮತ್ತೆಗೆ ಅವರಿಗೆ ಅವರೇ ಸಾಟಿ. ಅವರು ಶ್ರೀ ಮಠಕ್ಕೆ ಆಗಮಿಸಿದ್ದು ನಮಗೆ ಅತ್ಯಂತ ಸಂತಸ ನೀಡಿದೆ ಎಂದು ಮಠಾಧೀಶರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ