ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ..!

ಮಹಾರಾಷ್ಟ್ರ
 
     ಉತ್ತರ ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದ ಅತಿವೃಷ್ಟಿ ಸೃಷ್ಟಿಯಾಗಿತ್ತು. ಹೀಗಾಗಿ, ಈರುಳ್ಳಿ ಪೂರೈಕೆ ಇಲ್ಲದೆ ಕೆಜಿ ಈರುಳ್ಳಿ ಬೆಲೆ 100 ರೂಪಾಯಿ ದಾಟಿತ್ತು. ಅಲ್ಲದೆ, ಶೀಘ್ರವೇ ಈ ಬೆಲೆ 150 ರೂಪಾಯಿ ದಾಟಲಿದೆ ಎಂದು ಹೇಳಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈರುಳ್ಳಿ ಸಂಗ್ರಹಣೆ ಮೇಲೆ ಮಿತಿ ಹೇರಿದೆ. ಇದರಿಂದ ಶೇಖರಿಸಿಟ್ಟುಕೊಂಡ ಸ್ಟಾಕ್​ ಮಾರುಕಟ್ಟೆಗೆ ಬಂದಿದ್ದು, ಬೆಲೆ ಇಳಿಕೆ ಆಗಿದೆ.

    ಏಷ್ಯಾದ ಅತಿ ದೊಡ್ಡ ಹೋಲ್​ಸೇಲ್ ಈರುಳ್ಳಿ ಮಾರುಕಟ್ಟೆ ಲಸಲ್​ಗಾಂವ್​ನಲ್ಲಿ ಕೆಜಿ ಈರುಳ್ಳಿಗೆ 5 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಈ ಮಾರುಕ್ಟೆಯಲ್ಲಿ ಈರುಳ್ಳಿ ಬೆಲೆ  51 ರೂಪಾಯಿ ಆಗಿದೆ.

    ಬೆಂಗಳೂರು, ಮುಂಬೈ ಸೇರಿ ಅನೇಕ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಕಡಿಮೆ ಆಗಿದೆ. ಬೆಂಗಳೂರಲ್ಲಿ ಕೆಜಿ ಈರುಳ್ಳಿಗೆ 5-6 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಕೆಜಿ ಈರುಳ್ಳಿಗೆ 64 ರೂಪಾಯಿ ಆಗಿದೆ. ಇದು ಹೋಲ್​ ಸೇಲ್​ ದರ ಆಗಿದ್ದು, ಚಿಲ್ಲರೆ ವ್ಯಾಪಾರಿಗಳ ಬಳಿ ಈ ದರ ಹೆಚ್ಚಿದೆ.

    ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದೆ. ಈ ವೇಳೆ ಧಾರಾಕಾರವಾಗಿ ಮಳೆ ಆಗುತ್ತಿರುವುದರಿಂದ ಬೆಳೆ ಹಾನಿಯಾಗಿದೆ. ಎಕರೆಗೆ ಸರಾಸರಿ 250 ಚೀಲ ಈರುಳ್ಳಿ ಬೆಳೆ ಬರುತ್ತಿತ್ತು. ಆದರೆ, ಇದು ಈಗ 70 ಚೀಲಗಳಿಗೆ ಇಳಿಕೆ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ